
ಪಿಟಿಐ
ಸಾಂದರ್ಭಿಕ ಚಿತ್ರ
ನವದೆಹಲಿ: ದಕ್ಷಿಣ ಕೆಂಪು ಸಮುದ್ರದಲ್ಲಿ ಡ್ರೋನ್ ದಾಳಿಗೆ ಒಳಗಾಗಿದ್ದ ಹಡಗು ಭಾರತದ್ದಲ್ಲ ಎಂದು ನೌಕಾಪಡೆ ಭಾನುವಾರ ಸ್ಪಷ್ಟಪಡಿಸಿದೆ.
ದಾಳಿಗೆ ಒಳಗಾಗಿರುವ ಎಂವಿ ಸಾಯಿಬಾಬಾ ಹಡಗು ಗಬಾನ್‌ಗೆ ಸೇರಿದ್ದು, ಇದು ಭಾರತೀಯ ಹಡಗು ನೋಂದಣಾಧಿಕಾರಿ ಕಚೇರಿಯಿಂದ ಪ್ರಮಾಣಪತ್ರವನ್ನು ಮಾತ್ರ ಪಡೆದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹಡಗುಗಳು ಪ್ರಪಂಚದಾದ್ಯಂತದ ವಿವಿಧ ದೇಶಗಳಲ್ಲಿನ ನೋಂದಣಿ ಅಧಿಕಾರಿಗಳಿಂದ ಪ್ರಮಾಣೀಕರಣ ಪತ್ರ ಪಡೆಯುವ ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.