ADVERTISEMENT

ಭಾಷಾ ರಾಜಕೀಯ ಮಾಡುವ ನಾಯಕರು, ಆ ರಾಜ್ಯಗಳು ಅವನತಿಯತ್ತ: ಯುಪಿ ಸಿಎಂ ಯೋಗಿ

ಭಾಷಾ ರಾಜಕೀಯ ಮಾಡುವ ನಾಯಕರು ಮತ್ತು ಅವರ ರಾಜ್ಯಗಳು ಅವನತಿಯತ್ತ ಸಾಗುತ್ತವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಪಿಟಿಐ
Published 1 ಏಪ್ರಿಲ್ 2025, 6:54 IST
Last Updated 1 ಏಪ್ರಿಲ್ 2025, 6:54 IST
<div class="paragraphs"><p>ಸಿಎಂ ಯೋಗಿ ಆದಿತ್ಯನಾಥ</p></div>

ಸಿಎಂ ಯೋಗಿ ಆದಿತ್ಯನಾಥ

   

ಲಖನೌ: ಭಾಷಾ ರಾಜಕೀಯ ಮಾಡುವ ನಾಯಕರು ಮತ್ತು ಅವರ ರಾಜ್ಯಗಳು ಅವನತಿಯತ್ತ ಸಾಗುತ್ತವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಸಂದರ್ಶನದಲ್ಲಿ ಪಿಟಿಐ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿರುವ ಅವರು, ಹಿಂದಿ ಭಾಷೆಯೂ ಎಲ್ಲರ ಗೌರವಕ್ಕೆ ಪಾತ್ರವಾಗುತ್ತೆ ಎಂಬುದನ್ನು ಪ್ರತಿಯೊಬ್ಬರು ನಂಬುತ್ತಾರೆ. ಆದರೆ, ದೇಶವು ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿರುವುದನ್ನು ನಾವು ಒಪ್ಪಬೇಕಾಗುತ್ತದೆ ಎಂದಿದ್ದಾರೆ. ಈ ಮೂಲಕ ತಮಿಳುನಾಡು ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಎದ್ದಿರುವ ತ್ರಿಭಾಷಾ ವಿರೋಧಿ ಚಳವಳಿಗೆ ಯೋಗಿ ತಿರುಗೇಟು ನೀಡಿದ್ದಾರೆ.

ADVERTISEMENT

ಹಿಂದಿಯ ಜೊತೆಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಮರಾಠಿ ಭಾಷೆ ಕಲಿಯುವುದು ದೇಶದ ಏಕತೆಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ನಾವೂ ಸಹ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಮರಾಠಿ ಸೇರಿದಂತೆ ಭಾರತದ ಮುಂತಾದ ಭಾಷೆ ಕಲಿಸುತ್ತಿದ್ದೇವೆ. ಇದರಿಂದ ಹಿಂದಿ ಹಾಗೂ ಉತ್ತರ ಪ್ರದೇಶಕ್ಕೇನಾದರೂ ದಕ್ಕೆಯಾಗುತ್ತಿದೆಯೇ? ಎಂದು ಮರು ಪ್ರಶ್ನಿಸಿದ್ದಾರೆ.

ಭಾಷಾ ರಾಜಕೀಯ ಮಾಡುವವರು ಅದನ್ನು ಕೈಬಿಡಬೇಕು. ತಮ್ಮ ರಾಜಕೀಯ ಸ್ವಾರ್ಥ ಈಡೇರಿಸಿಕೊಳ್ಳಲು ಇನ್ನೇನಾದರೂ ಹುಡುಕಿಕೊಳ್ಳಬೇಕು. ಭಾಷಾ ರಾಜಕೀಯ ನಮ್ಮನ್ನು ಸಂಕುಚಿತಗೊಳಿಸುತ್ತದೆ. ಯುವಕರಿಗೆ ಉದ್ಯೋಗವಕಾಶಗಳು ತೆರೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಸಂಕುಚಿತ ರಾಜಕಾರಣ ಮಾಡಬಾರದು ಎಂದು ಹೇಳಿದರು.

ಭಾಷೆಗಳನ್ನು ಕಲಿಯುವುದರಿಂದ ನಮಗೆ ಅನುಕೂಲ ಇದೆ. ವಾರಾಣಸಿಯ ಕಾಶಿ ತಮಿಳು ಸಂಗಮ್ ಸಂಸ್ಥೆಯು ಇದಕ್ಕೆ ಉತ್ತಮ ಉದಾಹರಣೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.