ADVERTISEMENT

ರಾಮಾನುಜಾಚಾರ್ಯರ ಪ್ರತಿಮೆ: ಹೈದರಾಬಾದ್‌ನಲ್ಲಿ ‘ಸಮಾನತೆಯ ಪ್ರತಿಮೆ’ ಅನಾವರಣ

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ

ಸಚ್ಚಿದಾನಂದ ಕುರಗುಂದ
Published 5 ಫೆಬ್ರುವರಿ 2022, 17:45 IST
Last Updated 5 ಫೆಬ್ರುವರಿ 2022, 17:45 IST
ರಾಮಾನುಜಾಚಾರ್ಯರ ಪ್ರತಿಮೆ
ರಾಮಾನುಜಾಚಾರ್ಯರ ಪ್ರತಿಮೆ   

ಹೈದರಾಬಾದ್: ನಗರದ ಹೊರವಲಯದ 108 ಭವ್ಯ ದೇಗುಲಗಳ ಆವರಣದಲ್ಲಿನಿರ್ಮಿಸಲಾಗಿರುವ 216 ಅಡಿ ಎತ್ತರದ ಸಂತ ರಾಮಾನುಜಾಚಾರ್ಯರ ಪ್ರತಿಮೆಯನ್ನು (ಸಮಾನತೆಯ ಪ್ರತಿಮೆ) ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಶನಿವಾರ ಸಮರ್ಪಿಸಿದರು.

‘ಸಮಾನತೆಯ ಪ್ರತಿಮೆ’ ಎಂದು ಹೆಸರಿಸಲಾಗಿರುವ ಈ ಪ್ರತಿಮೆಯು ಪಂಚಲೋಹಗಳಿಂದ ಕೂಡಿದೆ. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ತವರಗಳಿಂದ ಕೂಡಿದ ಪಂಚಲೋಹದಿಂದ ಈ ಪ್ರತಿಮೆಯನ್ನು ತಯಾರಿಸಲಾಗಿದೆ. ಇದು ಕುಳಿತ ಭಂಗಿಯಲ್ಲಿರುವ ವಿಶ್ವದ ಅತಿ ಎತ್ತರದ ಲೋಹದ ಪ್ರತಿಮೆಯಾಗಿದೆ.

ಈ ಪ್ರತಿಮೆಯನ್ನು34 ಎಕರೆ ಪ್ರದೇಶದಲ್ಲಿ, 54 ಅಡಿ ಎತ್ತರದ ವೇದಿಕೆ ಮೇಲೆ ಸ್ಥಾಪಿಸಲಾಗಿದೆ. ‘ವೈದಿಕ ಡಿಜಿಟಲ್ ಲೈಬ್ರರಿ’ ಮತ್ತು ಸಂಶೋಧನಾ ಕೇಂದ್ರ, ರಂಗಮಂದಿರ, ರಾಮಾನುಜಾಚಾರ್ಯರ ಅನೇಕ ಕೃತಿಗಳು ಹಾಗೂ ಪ್ರಾಚೀನ ಭಾರತೀಯ ಗ್ರಂಥಗಳನ್ನು ಹೊಂದಿರುವ ಶೈಕ್ಷಣಿಕ ಗ್ಯಾಲರಿಗಳಿಗೆ ಮೀಸಲಾದ ಮಹಡಿಗಳನ್ನು ಇದು ಒಳಗೊಂಡಿದೆ. ಎರಡನೇ ಮಹಡಿಯಲ್ಲಿ 120 ಕೆ.ಜಿ.ತೂಕದ ಚಿನ್ನದ ಪ್ರತಿಮೆ ಸ್ಥಾಪಿಸಲಾಗಿದೆ.

ADVERTISEMENT

ಈ ಪ್ರತಿಮೆಯನ್ನು ರಾಮಾನುಜಾಚಾರ್ಯ ಆಶ್ರಮದ ಚಿನ್ನಜೀಯರ್ ಸ್ವಾಮೀಜಿ ಪರಿಕಲ್ಪನೆ ಆಧಾರದ ಮೇಲೆ ರೂಪಿಸಲಾಗಿದೆ. ಚಿನ್ನ ಜೀಯರ್ ಸ್ವಾಮೀಜಿ ಅವರು ಪ್ರತಿಮೆಗೆ 2014ರಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದರು. ಚೀನಾದ ಏರೊಸನ್ ಕಾರ್ಪೋರೇಷನ್ ಈ ಪ್ರತಿಮೆಯನ್ನು ನಿರ್ಮಿಸಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ರಾಮಾನುಜಾಚಾರ್ಯರ ಜೀವನ ಚರಿತ್ರೆ ಮತ್ತು ಬೋಧನೆಯ ಕುರಿತು 3ಡಿ ಪ್ರದರ್ಶಿಸ
ಲಾಯಿತು. ರಾಮಾನುಜಾಚರ್ಯರ 1,000ನೇ ಜನ್ಮ ದಿನಾಚರಣೆ ಅಂಗ
ವಾಗಿ ಹಮ್ಮಿಕೊಳ್ಳಲಾಗಿರುವ 12 ದಿನಗಳ ಕಾರ್ಯಕ್ರಮಗಳ ಭಾಗವಾಗಿ ಪ್ರತಿಮೆ ಉದ್ಘಾಟನೆ ನಡೆಯಿತು.

ಸಮಾನತೆ ಪ್ರತಿಪಾತಿದಿಸಿದ್ದ ರಾಮಾನುಜಾರ್ಯರು, ಲಿಂಗ, ಜನಾಂಗ, ಜಾತಿಯನ್ನು ಲೆಕ್ಕಿಸದೆ, ಪ್ರತಿಯೊಬ್ಬ ಮನುಷ್ಯನು ಸಮಾನರು ಎಂಬ ನಂಬಿಕೆಯ ಆಧಾರದ ಮೇಲೆ ಅವರು ಜನರನ್ನು ಒಗ್ಗೂಡಿಸುವ ಕಾರ್ಯ ಕೈಗೊಂಡಿದ್ದರು ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.