ADVERTISEMENT

ಟ್ರೋಲಿಗರ ಜೊತೆಗೆ ಸಮಾಧಾನದಿಂದ ವ್ಯವಹರಿಸಿ: ಆದಿತ್ಯ ಠಾಕ್ರೆ ಶಾಂತಿಪಾಠ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಡಿಸೆಂಬರ್ 2019, 5:16 IST
Last Updated 25 ಡಿಸೆಂಬರ್ 2019, 5:16 IST
ಆದಿತ್ಯ ಠಾಕ್ರೆ
ಆದಿತ್ಯ ಠಾಕ್ರೆ   

ಶಿವಸೈನಿಕರಿಗೆ ಮುಂಬೈನ ವರ್ಲಿ ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರಆದಿತ್ಯ ಠಾಕ್ರೆ ಸಮಾಧಾನದಿಂದ ವರ್ತಿಸುವಂತೆ ಕಿವಿಮಾತು ಹೇಳಿದ್ದಾರೆ.ಪೌರತ್ವ ಮಸೂದೆ ಕಾಯ್ದೆಗೆ ಸಂಬಂಧಿಸಿದಂತೆ ಶಿವಸೇನಾ ನಾಯಕ ಉದ್ಧವ್‌ ಠಾಕ್ರೆ ಮಾಡಿದ್ದ ಪೋಸ್ಟ್‌ಗೆಆಕ್ಷೇಪಾರ್ಹ ಎನ್ನಲಾದ ಕಾಮೆಂಟ್ ಮಾಡಿದ್ದ ವ್ಯಕ್ತಿಯನ್ನು ಥಳಿಸಿದ್ದ ಶಿವಸೈನಿಕರುತಲೆಬೋಳಿಸಿ ಪ್ರತೀಕಾರ ತೀರಿಸಿಕೊಂಡಿದ್ದರು.

‘ಟ್ರೋಲ್‌ ಮಾಡುವವರು ಇದ್ದೇ ಇರುತ್ತಾರೆ. ಕಾನೂನು ಕೈಗೆ ತೆಗೆದುಕೊಂಡು ಅಂಥವರನ್ನು ನಿರ್ವಹಿಸಲು ಆಗದು. ಸಮಾಧಾನದಿಂದ ವರ್ತಿಸಿ. ನಮ್ಮ ಕೆಲಸ ನಾವು ಮಾಡಬೇಕು.ಜನರಿಗೆ ನೀಡಿರುವ ಭರವಸೆ ಈಡೇರಿಸುವಲ್ಲಿ ನಾವು ತೋರುವ ಬದ್ಧತೆಯೇ ನಮ್ಮ ಉತ್ತರವಾಗಬೇಕು’ ಎಂದು ಅವರು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಮನವಿ ಮಾಡಿದ್ದಾರೆ.

‘ಮಹಾರಾಷ್ಟ್ರದಲ್ಲಿ ಶಾಂತಿ ಕಾಪಾಡುವ ಮುಖ್ಯಮಂತ್ರಿ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಸಭ್ಯ ಕಾಮೆಂಟ್‌ ಮಾಡಿದ್ದ ವ್ಯಕ್ತಿಯ ಮೇಲೆ ಶಿವಸೈನಿಕರು ಶಿಸ್ತು ತೋರಿದ ವಿಷಯ ತಿಳಿಯಿತು. ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಜವಾಬ್ದಾರಿ. ಯಾರೂ ಕಾನೂನೂ ಕೈಗೆತ್ತಿಕೊಳ್ಳಬಾರದು’ ಎಂದು ಆದಿತ್ಯ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ADVERTISEMENT

‘ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿಚಾರದಲ್ಲಿದೆಹಲಿ ಪೊಲೀಸರು ನಡೆದು ಕೊಂಡ ರೀತಿ ಜಲಿಯನ್ ವಾಲಾಭಾಗ್ ನೆನಪಿಸುವಂತಿದೆ’ ಎಂದಿದ್ದ ಉದ್ಧವ್ ಠಾಕ್ರೆ ಹೇಳಿಕೆಯನ್ನು ಟ್ರೋಲ್ ಮಾಡುವಾಗ ‘ಬಾಲ್ಡ್’ (ಬಕ್ಕತಲೆಯವನು) ಎಂದಿದ್ದಮುಂಬೈನ ವಡಾಲಾ ನಿವಾಸಿ ಹಿರಮಣಿ ತಿವಾರಿ ಅವರನ್ನು ಥಳಿಸಿದ್ದ ಶಿವಸೈನಿಕರು ತಲೆಬೋಳಿಸಿದ್ದರು.

‘ನಮ್ಮ ಮುಖ್ಯಮಂತ್ರಿಯನ್ನು ಗಮನಿಸಿ. ಜನರಿಗೆ ಕೊಟ್ಟ ಆಶ್ವಾಸನೆ ಈಡೇರಿಸುವ ತುಡಿತ ಹೊಂದಿರುವ ಅವರುಸದಾ ಶಾಂತವಾಗಿ ವರ್ತಿಸುತ್ತಾರೆ. ಜನರ ಆಶೋತ್ತರ ಈಡೇರಿಸುವುದೇ ಟ್ರೋಲಿಗರಿಗೆ ನಾವು ಕೊಡುವ ಉತ್ತರವಾಗಬೇಕು. ಹೊಸ ಉದ್ಯೋಗ ಸೃಷ್ಟಿ, ಆರ್ಥಿಕತೆಯ ಪುನಶ್ಚೇತನ ನಮ್ ಆದ್ಯತೆಯಾಗಬೇಕು’ ಎಂದು ಆದಿತ್ಯ ವಿವರಿಸಿದ್ದಾರೆ.

‘ಇಂಥ ಟ್ರೋಲಿಗರು ನೂರಾರು ಮಂದಿಯಿದ್ದಾರೆ. ಅವರ ವಿಕೃತ ಮಾತುಗಳನ್ನು ದೇಶ ಕೇಳಿಸಿಕೊಳ್ಳುತ್ತಿಲ್ಲ ಎಂಬ ಆಕ್ರೋಶ ಅವರಲ್ಲಿದೆ. ಮಹಿಳೆಯರು ಮತ್ತು ಮಕ್ಕಳ ಬಗ್ಗೆಯೂ ಅವರು ಕೆಟ್ಟ ಮಾತುಗಳನ್ನು ಆಡುತ್ತಾರೆ. ಅವರಿಗೆ ಉತ್ತರ ಕೊಡುವುದು ನಮ್ಮ ಕೆಲಸವಲ್ಲ. ನಿರ್ಲಕ್ಷಿಸಿ, ಸಮಧಾನವಾಗಿರುವುದೇ ತಕ್ಕ ಉತ್ತರ’ ಎಂದು ಆದಿತ್ಯ ಅಭಿಪ್ರಾಯಪಟ್ಟಿದ್ದಾರೆ.

‘ದೇಶದ ಶಾಂತಿ ಕದಡಲು ಬಯಸುವ ಜನರನ್ನು ದೇಶದ ಪ್ರಜಾಪ್ರಭುತ್ವ ತಿರಸ್ಕರಿಸಿದೆ. ಜನರನ್ನು ಬೆದರಿಸುತ್ತಿದ್ದ, ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಹರಿಬಿಟ್ಟು ಅವರ ಮೇಲೆ ಹಲ್ಲೆಯಾಗುವಂತೆ ಮಾಡುತ್ತಿದ್ದವರಿಗೆ ದೇಶದಲ್ಲಿ ಸೌಹಾರ್ಯ ನೆಲೆಸುವುದು ಬೇಕಿಲ್ಲ. ಸಮಾಜ ಒಡೆಯುವುದೇ ಅವರ ಉದ್ದೇಶ’ ಎಂದು ಆದಿತ್ಯ ಠಾಕ್ರೆ ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದ್ದಾರೆ.

–––

ತ್ವರಿತ ಸುದ್ದಿ, ನಿಖರ ಮಾಹಿತಿಗೆwww.prajavani.netನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.