ADVERTISEMENT

ರಾಜಕೀಯ ಸಮಾವೇಶಗಳು ಕಂಡು ಬಂದರೆ ಸುಮ್ಮನಿರುವುದಿಲ್ಲ; ಬಾಂಬೆ ಹೈಕೋರ್ಟ್

ಕೋವಿಡ್ ಮೂರನೇ ಅಲೆ ತಡೆಗಟ್ಟಲು ಸರ್ಕಾರಕ್ಕೆ ನಿರ್ದೇಶನ

ಪಿಟಿಐ
Published 30 ಜೂನ್ 2021, 8:30 IST
Last Updated 30 ಜೂನ್ 2021, 8:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ; 'ಕೋವಿಡ್ ಮೂರನೇ ಅಲೆ ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ರಾಜಕೀಯ ಸಮಾವೇಶಗಳು ನಡೆಯದಂತೆ ನೋಡಿಕೊಳ್ಳಬೇಕು' ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ತಾಕೀತು ಮಾಡಿದೆ.

ಕೋವಿಡ್ ಮೂರನೇ ಅಲೆ ತಡೆಗಟ್ಟಲುಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.

ಕೋವಿಡ್ ನಡುವೆಯೂ ಈ ತಿಂಗಳ ಮಧ್ಯಂತರ ಅವಧಿಯಲ್ಲಿ ಮುಂಬೈನಲ್ಲಿ ದೊಡ್ಡ ರಾಜಕೀಯ ಸಮಾವೇಶ ನಡೆಸಲು ಅವಕಾಶ ಕೊಟ್ಟಿದ್ದೇಕೆ? ಎಂದು ನ್ಯಾ, ದೀಪಾಂಕರ್ ದತ್ತಾ ಮತ್ತು ಜಿ.ಎಸ್ ಕುಲಕರ್ಣಿ ಅವರನ್ನೊಳಗೊಂಡ ಪೀಠ ಸರ್ಕಾರಕ್ಕೆ ಪ್ರಶ್ನಿಸಿತು.

ADVERTISEMENT

ನವಿ ಮುಂಬೈನಲ್ಲಿ ನಿರ್ಮಾಣವಾಗುತ್ತಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಳಾ ಸಾಹೇಬ್ ಠಾಕ್ರೆ ಅವರ ಹೆಸರನ್ನಿಡಬೇಕು ಎಂದು ಇತ್ತೀಚಿಗೆಶಿವಸೇನಾ ನಾಯಕ ಬಿ.ಡಿ ಪಾಟೀಲ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶ ನಡೆದಿತ್ತು.

'ಇನ್ನೂ ವಿಮಾನ ನಿಲ್ದಾಣ ನಿರ್ಮಾಣವಾಗಿಲ್ಲ.ಅದಾಗಲೇ ಜನ ತಮಗೆ ಬೇಕಾದವರ ಹೆಸರು ಇಡಬೇಕು ಎಂದು ರಾಜಕೀಯ ಉದ್ದೇಶದಿಂದ ಬೀದಿಗಿಳಿಯುತ್ತಿರುವುದು ದುರದೃಷ್ಟಕರ. ಕೊನೆ ಪಕ್ಷ ಕೋವಿಡ್ ಹೋಗುವವರೆಗೂ ಕಾಯುವ ತಾಳ್ಮೆ ಇಲ್ಲವಾ? ಎಂದು ಪೀಠ ಪ್ರಶ್ನಿಸಿದೆ.

'ಕೋವಿಡ್ ಇರುವುದರಿಂದಯಾವುದೇ ಬೃಹತ್ ರಾಜಕೀಯ ಸಮಾವೇಶ ನಡೆಯಲು ಅವಕಾಶ ಕೊಡಕೂಡದು. ಒಂದು ವೇಳೆ ನಿಮಗೆ (ಸರ್ಕಾರ) ತಡೆಯಲು ಆಗದಿದ್ದರೆ ಹೇಗೆ ತಡೆಯಬೇಕು ಎಂಬುದು ನಮಗೆ ಗೊತ್ತು' ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.