ತಿರುವನಂತಪುರ: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ವಿಮಾನನಿಲ್ದಾಣ ನಿರ್ವಹಣಾ ಸಿಬ್ಬಂದಿ (ಗ್ರೌಂಡ್ ಹ್ಯಾಡ್ಲಿಂಗ್) ಪ್ರತಿಭಟನೆ ನಡೆಸಿದ್ದರಿಂದ ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ವೇತನ ಏರಿಕೆ ಹಾಗೂ ಬೋನಸ್ ನೀಡುವಂತೆ ಆಗ್ರಹಿಸಿ ನೌಕರರು ಭಾನುವಾರ ಬೆಳಿಗ್ಗೆ ಕೆಲಸಕ್ಕೆ ಗೈರಾಗಿದ್ದರು. ಮಧ್ಯಾಹ್ನದ ವೇಳೆ ಆಡಳಿತ ಮಂಡಳಿಯು ಕೆಲವು ಬೇಡಿಕೆಗೆ ಒಪ್ಪಿದ್ದರಿಂದ ಎಂದಿನಂತೆ ಕೆಲಸಕ್ಕೆ ಹಾಜರಾದರು.
ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಭಾನುವಾರ ಬೆಳಿಗ್ಗೆ 30 ನಿಮಿಷಗಳ ಕಾಲ ಹಾರಾಟದಲ್ಲಿ ತಡವಾಯಿತು. ಸರಕುಗಳ ಸಾಗಾಟದಲ್ಲಿ ತೀವ್ರ ವ್ಯತ್ಯಯ ಉಂಟಾಯಿತು. ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ಮೂಲಕ, ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು ಎಂದು ತಿಳಿದುಬಂದಿದೆ.
₹5 ಸಾವಿರ ವೇತನ ಏರಿಕೆ ಹಾಗೂ ಬೋನಸ್ ನೀಡುವಂತೆ ನೌಕರರು ಆಗ್ರಹಿಸಿದ್ದರು. ಬೇಡಿಕೆಗಳನ್ನು ಎರಡು ವರ್ಷದ ಒಳಗಾಗಿ ಹಂತ ಹಂತವಾಗಿ ಪೂರೈಸಲು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.