
ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ. ಈ ದಿನವನ್ನು (ಜನವರಿ 23) ‘ಪರಾಕ್ರಮ ದಿವಸ್’ ಆಗಿ ಆಚರಿಸಲಾಗುತ್ತದೆ.
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೋಸ್ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲು 2021ರಲ್ಲಿ ಅವರ ಹುಟ್ಟುಹಬ್ಬದ ದಿನವಾದ ಜ.23ರಂದು ಪರಾಕ್ರಮ ದಿನ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿತು. ಈ ದಿನದ ಆಚರಣೆಯ ಮೂಲ ಉದ್ದೇಶ ಸ್ವಾತಂತ್ರ್ಯ ಹೋರಾಟಕ್ಕಾಗಿ ಅವರು ಮಾಡಿದ ತ್ಯಾಗವನ್ನು ಮುಂದಿನ ಪೀಳಿಗೆಯವರಿಗೆ ತಿಳಿಸುವುದಾಗಿದೆ.
ನೇತಾಜಿ ಅವರ ಪ್ರೇರಣಾತ್ಮಕ ನುಡಿಗಳು
ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ.
ಒಬ್ಬ ವ್ಯಕ್ತಿ ತನ್ನ ಸಿದ್ದಾಂತಕ್ಕಾಗಿ ಸಾಯಬಹುದು, ಆದರೆ ಅವನ ಮರಣದ ನಂತರವೂ ಉಳಿಯುವ ಆ ಸಿದ್ದಾಂತ ಸಾವಿರ ಜನರಲ್ಲಿ ಅವತರಿಸುತ್ತದೆ
ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ. ಅದನ್ನು ನಾವೇ ಪಡೆಯಬೇಕು
ಬದುಕಿನಲ್ಲಿ ಯಾವುದೇ ಸವಾಲು, ಹೋರಾಟ ಇಲ್ಲದಿದ್ದರೆ ಜೀವನವು ಅರ್ಧದಷ್ಟು ಆಸಕ್ತಿಯನ್ನು ಕಳೆದುಕೊಳ್ಳುತ್ತದೆ.
ಜನ, ಹಣ ಮತ್ತು ವಸ್ತುಗಳಿಂದ ಮಾತ್ರ ಗೆಲುವು ಅಥವಾ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಿಲ್ಲ. ವೀರೋಚಿತ ಸಾಧನೆಗಳಿಗೆ ಪ್ರೇರೇಪಿಸುವ ಪ್ರೇರಕ ಶಕ್ತಿಯೂ ನಮ್ಮಲ್ಲಿರಬೇಕು.
ಅನ್ಯಾಯವನ್ನು ಸಹಿಸಿಕೊಳ್ಳುವುದು ಹಾಗೂ ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಅತ್ಯಂತ ಘೋರ ಅಪರಾಧ.
ಕೇವಲ ಚರ್ಚೆಗಳಿಂದ ಇತಿಹಾಸದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯವಿಲ್ಲ.
ಭಾರತದ ಮೇಲೆ ಇಟ್ಟಿರುವ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಬೇಡಿ. ದೇಶವನ್ನು ಬಂಧನದಲ್ಲಿಡುವ ಯಾವ ಶಕ್ತಿಯೂ ಭೂಮಿಯಲ್ಲಿ ಇಲ್ಲ. ಶೀಘ್ರದಲ್ಲೇ ಭಾರತ ಸ್ವತಂತ್ರವಾಗಲಿದೆ.
ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ವಾತಂತ್ರ್ಯವೊಂದೇ ಪರಿಹಾರ. ಗುಲಾಮಿತನದ ಸಂಕೋಲೆಯನ್ನು ಕಿತ್ತೆಸೆಯಲು ಒಂದೇ ಹೃದಯ, ಒಂದು ಪ್ರಾಣವಾಗಿ ಎಲ್ಲರೂ ಕಟಿಬದ್ಧರಾಗಬೇಕಾಗಿದೆ.
ಯಶಸ್ಸು ಯಾವಾಗಲೂ ವೈಫಲ್ಯದ ಸ್ತಂಭದ ಮೇಲೆ ನಿಂತಿದೆ. ಆದ್ದರಿಂದ ಯಾರೂ ಸೋಲಿಗೆ ಭಯಪಡಬಾರದು.
ನಿಮ್ಮ ಸ್ವಂತ ಶಕ್ತಿಯನ್ನು ನಂಬಿ, ಎರವಲು ಪಡೆದ ಶಕ್ತಿ ನಿಮಗೆ ಎಂದಿಗೂ ಮಾರಕ.
ಉತ್ಸಾಹ ಇಲ್ಲದೆ ಯಾವ ಮಹತ್ತರ ಕೆಲಸವೂ ನಡೆಯಲ್ಲ.
ತಾಯಿಯ ಪ್ರೀತಿ ಅತ್ಯಂತ ಆಳವಾದದ್ದು. ಏಕೆಂದರೆ ಅದರಲ್ಲಿ ಯಾವುದೇ ಸ್ವಾರ್ಥ ಇರುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.