ದೀರ್ಘ ವ್ಯಾಪ್ತಿ ಸಾಮರ್ಥ್ಯದ ಗ್ಲೈಡ್ ಬಾಂಬ್ ‘ಗೌರವ್’ದ ಪರೀಕ್ಷೆಯನ್ನು ಡಿಆರ್‌ಡಿಒ ಯಶಸ್ವಿಯಾಗಿ ನೆರವೇರಿಸಿದೆ
–ಪಿಟಿಐ ಚಿತ್ರ
ನವದೆಹಲಿ: ಸುಖೋಯ್ ಯುದ್ಧವಿಮಾನ ಬಳಸಿ, ದೀರ್ಘ ವ್ಯಾಪ್ತಿ ಸಾಮರ್ಥ್ಯದ ಗ್ಲೈಡ್ ಬಾಂಬ್ (ಎಲ್‌ಆರ್‌ಜಿಬಿ) ‘ಗೌರವ್’ದ ಪರೀಕ್ಷೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್‌ಡಿಒ) ಯಶಸ್ವಿಯಾಗಿ ನೆರವೇರಿಸಿದೆ.
‘ಏಪ್ರಿಲ್ 8ರಿಂದ 10ರ ವರೆಗೆ ಈ ಪರೀಕ್ಷೆಗಳನ್ನು ನೆರವೇರಿಸಲಾಗಿದೆ. ಈ ಬಾಂಬ್ 100 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ತಲುಪಿ, ನಾಶ ಮಾಡಿತು’ ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.
ಈ ಪರೀಕ್ಷೆಯಿಂದಾಗಿ ವಾಯುಪಡೆಗೆ ಈ ಅತ್ಯಾಧುನಿಕ ಆಯುಧವನ್ನು ಸೇರ್ಪಡೆ ಮಾಡುವುದಕ್ಕೆ ದಾರಿ ಸುಗಮಗೊಂಡಂತಾಗಿದೆ ಎಂದೂ ಸಚಿವಾಲಯ ತಿಳಿಸಿದೆ.
ಡಿಆರ್‌ಡಿಒ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿರುವ ‘ಗೌರವ್’, ಸಾವಿರ ಕೆ.ಜಿ ಭಾರವಿದೆ.
ಪರೀಕ್ಷೆ ಯಶಸ್ವಿಯಾಗಿರುವುದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್‌ಡಿಒ, ವಾಯುಪಡೆ ಹಾಗೂ ಈ ಬಾಂಬ್ ಅಭಿವೃದ್ಧಿಗೆ ಕೈಜೋಡಿಸಿರುವ ಉದ್ದಿಮೆಗಳನ್ನು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.