ADVERTISEMENT

ಶಾಲೆಗಳಲ್ಲಿ ‘ವಂದೇ ಮಾತರಂ’ಗೀತೆ ಕಡ್ಡಾಯಗೊಳಿಸಿ: ಸುಧಾಮೂರ್ತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 16:34 IST
Last Updated 9 ಡಿಸೆಂಬರ್ 2025, 16:34 IST
ಸುಧಾಮೂರ್ತಿ
ಸುಧಾಮೂರ್ತಿ   

ನವದೆಹಲಿ: ದೇಶದ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಸರ್ಕಾರವನ್ನು ಒತ್ತಾಯಿಸಿದರು.

ಲೋಕಸಭೆಯಲ್ಲಿ ಮಾತನಾಡಿದ ಅವರು, ‘ಭಾರತದ ಪ್ರತಿ ರಾಜ್ಯ ಒಂದೊಂದು ಬಣ್ಣದ ಬಟ್ಟೆಯ ತುಂಡುಗಳಿದ್ದಂತೆ. ಆ ತುಂಡುಗಳನ್ನು ಸೇರಿಸಿ ಹೊಲಿಯುವ ದಾರ ಮತ್ತು ಸೂಜಿಯೇ ವಂದೇ ಮಾತರಂ ಗೀತೆ’ ಎಂದು ಅವರು ಬಣ್ಣಿಸಿದರು.

ಶಾಲೆಗಳಲ್ಲಿ ವಂದೇ ಮಾತರಂ ಗೀತೆ ಕಲಿಸುವ ಕುರಿತು ಮಾತನಾಡಿದ ಅವರು, 'ನಾವು ನಮ್ಮ ಮಕ್ಕಳಿಗೆ ಈಗ‌ 'ಜನ ಗಣ ಮನ' ರಾಷ್ಟ್ರಗೀತೆಯನ್ನು ಕಲಿಸುತ್ತಿದ್ದೇವೆ. ವಂದೇ ಮಾತರಂ ಗೀತೆ ಕಲಿಸಲು ಇನ್ನೂ ಮೂರು ನಿಮಿಷಗಳು ಬೇಕಾಗುತ್ತವೆ. ಆದರೆ, ನಾವು ಅದನ್ನು ಕಲಿಸುತ್ತಿಲ್ಲ. ಹೀಗೇ ಆದರೆ, ನಮ್ಮ ಮಕ್ಕಳು ವಂದೇ ಮಾತರಂ ಗೀತೆಯ ಸಾಹಿತ್ಯವನ್ನೇ ಸಂಪೂರ್ಣ ಮರೆಯುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.