ADVERTISEMENT

‌ಸುಯೆಜ್‌ ಕಾಲುವೆಯಲ್ಲಿ ಸಿಲುಕಿರುವ ಹಡಗು ತೆರವಿನ ಪ್ರಯತ್ನ ಮುಂದುವರಿಕೆ

ಇಂದು ಕಾರ್ಯಾಚರಣೆ ಪೂರ್ಣಗೊಳ್ಳುವ ವಿಶ್ವಾಸ: ಹಡಗಿನ ಮಾಲೀಕರು

ಏಜೆನ್ಸೀಸ್
Published 27 ಮಾರ್ಚ್ 2021, 9:08 IST
Last Updated 27 ಮಾರ್ಚ್ 2021, 9:08 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಸುಯೆಜ್‌/ಕೈರೊ(ಎಪಿ/ಎಎಫ್‌ಪಿ): ಸುಯೆಜ್‌ ಕಾಲುವೆಯಲ್ಲಿ ಎವರ್‌ ಗಿವನ್‌ ಬೃಹತ್ ಗಾತ್ರದ ಹಡಗು ಸಿಲುಕಿಕೊಂಡು ಐದು ದಿನಗಳಾಗಿದ್ದು, ಅದನ್ನು ತೆರವುಗೊಳಿಸಲು ತಜ್ಞರು ವಿವಿಧ ರೀತಿಯ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಕಾಲುವೆಗೆ ಅಡ್ಡವಾಗಿ ಸಿಕ್ಕಿಕೊಂಡಿರುವ ಹಡಗನ್ನು ತೆರವುಗೊಳಿಸಲು ಶುಕ್ರವಾರ ಕೈಗೊಂಡ ಪ್ರಯತ್ನಗಳು ಫಲ ನೀಡಲಿಲ್ಲ ಎಂದು ತಾಂತ್ರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಎರಡೂ ದಿಕ್ಕುಗಳ ಜಲಮಾರ್ಗವನ್ನು ಬಂದ್‌ ಮಾಡಿರುವ ಹಡಗನ್ನು ಶನಿವಾರದೊಳಗೆ ತೆರವುಗೊಳಿಸಲಾಗುತ್ತದೆ ಎಂದು ಹಡಗಿನ ಮಾಲೀಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಏಷ್ಯಾ ಮತ್ತು ಯೂರೋಪ್‌ ನಡುವೆ ಸರಕು ಸಾಗಿಸುವ ನಾಲ್ಕು ಫುಟ್ಬಾಲ್ ಮೈದಾನಗಳಿಗಿಂತಲೂ ಉದ್ದವಾದ ಎಂ.ವಿ ಎವರ್ ಗಿವನ್‌ ಹಡಗು ಮಂಗಳವಾರ ಆಫ್ರಿಕಾ ಮತ್ತು ಸಿನಾಯ್ ಪರ್ಯಾಯ ದ್ವೀಪಗಳ ನಡವಿರುವ ಕಿರಿದಾದ ಸುಯೆಜ್ ಕಾಲುವೆಯಲ್ಲಿ ಕೆಟ್ಟು ನಿಂತಿದೆ. ಈ ಬೃಹತ್ ಹಡಗು ಸುಯೆಜ್‌ ನಗರದ ಸಮೀಪವಿರುವ ದಕ್ಷಿಣ ದ್ವಾರದಿಂದ ಉತ್ತರಕ್ಕೆ ಆರು ಕಿಲೋಮೀಟರ್ (3.7 ಮೈಲಿ) ದೂರದಲ್ಲಿರುವ ಕಾಲುವೆಯ ಏಕ ಪಥದಲ್ಲಿ ಸಿಲುಕಿಕೊಂಡಿದೆ.

ಈ ಕಾಲುವೆಯಲ್ಲಿ ಸಿಕ್ಕಿಕೊಂಡ ನಂತರ, ಈ ಜಲಮಾರ್ಗದಲ್ಲಿ ಸಂಚರಿಸುವ ಹಡಗುಗಗಳು ತಮ್ಮ ಮಾರ್ಗ ಬದಲಿಸಿಕೊಂಡು, ಆಫ್ರಿಕಾದ ಮೂಲಕ ಸಾಗುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.