ADVERTISEMENT

ಪಂಜಾಬ್: ಲಾಕ್‌ಡೌನ್ ಅವಧಿಯಲ್ಲಿ ಆತ್ಮಹತ್ಯೆ, ಕೌಟುಂಬಿಕ ಹಿಂಸೆ ಪ್ರಕರಣ ಹೆಚ್ಚು

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 9:58 IST
Last Updated 28 ಜೂನ್ 2020, 9:58 IST
ಲೂದಿಯಾನ ಡಿಸಿಪಿ ಅಖಿಲ್ ಚೌದರಿ
ಲೂದಿಯಾನ ಡಿಸಿಪಿ ಅಖಿಲ್ ಚೌದರಿ   

ಲೂದಿಯಾನ(ಪಂಜಾಬ್)(ಎಎನ್ಐ): ಕೊರೊನಾ ಸೋಂಕು ತಡೆಗಟ್ಟಲು ಜಾರಿಗೆ ತಂದ ಲಾಕ್‌ಡೌನ್ ಅವಧಿಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹಾಗೂ ಕೌಟುಂಬಿಕ ಹಿಂಸೆ ವಿರುದ್ಧ ಪ್ರಕರಣಗಳು ಹೆಚ್ಚು ದಾಖಲಾಗಿವೆ ಎಂದು ಪಂಜಾಬ್ ಡಿಸಿಪಿ ಅಖಿಲ್ ಚೌದರಿ ಹೇಳಿದ್ದಾರೆ.

ಲಾಕ್‌ಡೌನ್ ಜಾರಿಯಾಗುವ ಮುಂಚಿನ ಅವಧಿಯಲ್ಲಿ ಲೂದಿಯಾನದಲ್ಲಿ 60 ಆತ್ಮಹತ್ಯೆ ಪ್ರಕರಣಗಳು ಹಾಗೂ ಮನೆಯೊಳಗಿನ ನಡೆದ ಹಿಂಸೆ ವಿರುದ್ಧ 850ಪ್ರಕರಣ ದಾಖಲಾಗಿವೆ. ಲಾಕ್‌ಡೌನ್ ಅವಧಿಯಲ್ಲಿ 100 ಆತ್ಮಹತ್ಯೆ ಪ್ರಕರಣ ಹಾಗೂ ಮನೆಯೊಳಗಿನ ಹಿಂಸೆ ವಿರುದ್ಧ 1500 ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಮಾನಸಿಕ ಒತ್ತಡ, ನಿರುದ್ಯೋಗ, ಹಣಕಾಸಿನ ತೊಂದರೆಯೇ ಈ ಪ್ರಕರಣ ನಡೆಯಲು ಪ್ರಮುಖ ಕಾರಣ ಎಂದು ಕಂಡು ಬಂದಿದೆ. ಇವೆಲ್ಲಾ ಕಾರಣಗಳು ಆತ್ಮಹತ್ಯೆಗೆ ಪ್ರೇರೇಪಿಸಿವೆ. 30 ರಿಂದ 40 ವರ್ಷದೊಳನವರು ಹೆಚ್ಚಿನ ಸಂಖ್ಯೆಯಲ್ಲಿ
ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡಿಸಿಪಿ ಅಖಿಲ್ ಚೌದರಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.