ADVERTISEMENT

ಸುಖೇಶ್‌ ಅರ್ಜಿ: ಇ.ಡಿ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್‌

ಪಿಟಿಐ
Published 3 ಮಾರ್ಚ್ 2023, 5:03 IST
Last Updated 3 ಮಾರ್ಚ್ 2023, 5:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ತಮ್ಮ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಉದ್ಯಮಿ ಸುಖೇಶ್‌ ಚಂದ್ರಶೇಖರ್‌ ಸಲ್ಲಿಸಿರುವ ಅರ್ಜಿ ಕುರಿತು ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್‌ ಗುರುವಾರ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಸೂಚಿಸಿದೆ.

ಆರೋಪಿ ಪರ ವಕೀಲ ಮತ್ತು ಇ.ಡಿ. ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ದಿನೇಶ್‌ ಕುಮಾರ್‌ ಶರ್ಮ, ‘ಈ ಪ್ರಕರಣವು ಮತ್ತಷ್ಟು ಪರಿಶೀಲನೆಗೆ ಒಳಗಾಗಬೇಕಿದೆ’ ಎಂದರು. ಜೊತೆಗೆ, ಲಿಖಿತ ಹೇಳಿಕೆ ಸಲ್ಲಿಸುವಂತೆ ಉಭಯ ಬಣದವರಿಗೂ ನಿರ್ದೇಶಿಸಿದರು. ಪ್ರಕರಣದ ವಿಚಾರಣೆಯನ್ನು ಏಪ್ರಿಲ್‌ 5ಕ್ಕೆ ನಿಗದಿಪಡಿಸಿದರು.

ಚುನಾವಣಾ ಆಯೋಗಕ್ಕೆ ಲಂಚ ನೀಡುವುದಾಗಿ ಎಐಡಿಎಂಕೆ ನಾಯಕರೊಬ್ಬರಿಂದ ಹಣ ಪಡೆದಿರುವುದೂ ಸೇರಿದಂತೆ, ಇನ್ನೂ ಕೆಲ ಸುಲಿಗೆ ಆರೋಪಗಳು ಸುಖೇಶ್‌ ಮೇಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.