ADVERTISEMENT

ಸುನೀಲ್‌ ಕುಮಾರ್‌ ಭಟ್‌ ಹತ್ಯೆ ಪ್ರಕರಣ: ಉಗ್ರರ ಗುರುತು ಪತ್ತೆಯಾಗಿದೆ ಎಂದ ಡಿಜಿಪಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 14:50 IST
Last Updated 17 ಆಗಸ್ಟ್ 2022, 14:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಗುಂಡಿನ ದಾಳಿ ನಡೆಸಿ ಕಾಶ್ಮೀರ ಪಂಡಿತ ಸಮುದಾಯದ ವ್ಯಕ್ತಿಯನ್ನು ಹತ್ಯೆಗೈದಿದ್ದ ಉಗ್ರರ ಗುರುತು ಪತ್ತೆ ಮಾಡಲಾಗಿದೆ.ಅವರಿಗೆ ಶಿಕ್ಷೆ ಕಠಿಣ ನೀಡಲಾಗುವುದು ಎಂದು ರಾಜ್ಯದ ಡಿಜಿಪಿ ದಿಲ್‌ಬಾಘ್‌ ಸಿಂಗ್‌ ಬುಧವಾರ ಹೇಳಿದ್ದಾರೆ.

ಮೃತವ್ಯಕ್ತಿ ಸನೀಲ್‌ ಕುಮಾರ್‌ ಭಟ್‌ ಅವರ ದಾಯಾದಿ,ಪ್ರಕರಣದ ಪ್ರತ್ಯಕ್ಷದರ್ಶಿ ಪೀತಾಂಬರ್‌ ಭಟ್‌ ಅವರು ಉಗ್ರನನ್ನು ಗುರುತಿಸಿದ್ದಾರೆ.

ಗುರುತು ಪತ್ತೆ ಆಗಿರುವ ಇಬ್ಬರು ಉಗ್ರರೂ ನಿಷೇಧಿತ ಉಗ್ರ ಸಂಘಟನೆಯಾದ ‘ಅಲ್‌–ಬರ್ದಾರ್‌’ಗೆ ಸೇರಿರುವವರು. ಉಗ್ರರಲ್ಲಿ ಒಬ್ಬನಾದ ಆದಿಲ್‌ ವಾನಿಯುಹತ್ಯೆ ನಡೆಸಿದ ಬಳಿಕ ಕುಟ‌್ಪೋರಾದ ತನ್ನ ಮನೆಯಲ್ಲಿ ಆಶ್ರಯ ಪಡೆದಿದ್ದನು. ಆತನನ್ನು ಸೆರೆಹಿಡಿಯಲು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಆದರೆ, ಪೊಲೀಸರ ಕಡೆ ಗ್ರೆನೇಡ್‌ಗಳನ್ನು ಎಸೆದು ಆತ ಕತ್ತಲಲ್ಲಿ ತಪ್ಪಿಸಿಕೊಂಡ.ಆತನ ಮನೆಯಲ್ಲಿ ಶೋಧಕಾರ್ಯ ನಡೆಸಿದ ವೇಳೆ ಶಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮನೆಯನ್ನು ಮುಟ್ಟುಗೋಲು ಹಾಕಲಾಗಿದೆ. ಜೊತೆಗೆ, ಉಗ್ರನಿಗೆ ಆಶ್ರಯ ನೀಡಿದ್ದಕ್ಕಾಗಿ ಆತನ ತಂದೆ ಮತ್ತು ಮೂವರು ಸಹೋದರರನ್ನು ಬಂಧಿಸಲಾಗಿದೆ ಎಂದುಪೊಲೀಸರು ಹೇಳಿದ್ದಾರೆ.

ADVERTISEMENT

ಸುನೀಲ್‌ ಮತ್ತು ಪೀತಾಂಬರ್‌ ಸೇಬು ತೋಟದಲ್ಲಿ ಮಂಗಳವಾರ ಕೆಲಸ ಮಾಡುತ್ತಿದ್ದ ವೇಳೆ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ಪೀತಾಂಬರ್‌ ಗಾಯಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.