ADVERTISEMENT

ನೊಯ್ಡಾದ ಅವಳಿ ಕಟ್ಟಡ ಇಂದು ನೆಲಸಮ

ಪಿಟಿಐ
Published 27 ಆಗಸ್ಟ್ 2022, 20:04 IST
Last Updated 27 ಆಗಸ್ಟ್ 2022, 20:04 IST
ನೆಲಸಮಗೊಳ್ಳಲಿರುವ ಅವಳಿ ಕಟ್ಟಡ 
ನೆಲಸಮಗೊಳ್ಳಲಿರುವ ಅವಳಿ ಕಟ್ಟಡ    

ನೊಯ್ಡಾ: ಇಲ್ಲಿ ನಿರ್ಮಾಣಗೊಂಡಿರುವ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ಭಾನುವಾರ ಮಧ್ಯಾಹ್ನ ನೆಲಸಮಗೊಳಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

‘ಸುಮಾರು 100 ಮೀಟರ್‌ನಷ್ಟು ಎತ್ತರವಿರುವ ಈ ಕಟ್ಟಡಗಳನ್ನು ನೆಲಸಮ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಾನುವಾರ ಮಧ್ಯಾಹ್ನ 2.30ಕ್ಕೆ ನೆಲಸಮ ಕಾರ್ಯ ಆರಂಭವಾಗಲಿದೆ’ ಎಂದು ನೊಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ಹೇಳಿದ್ದಾರೆ.

‘ಕಟ್ಟಡಗಳನ್ನು ಕೆಡವಲು ಸುಮಾರು 3,700 ಕೆ.ಜಿ ಸ್ಫೋಟಕಗಳನ್ನು ಬಳಸಲಾಗುತ್ತದೆ. ಎಮರಾಲ್ಡ್‌ ಕೋರ್ಟ್‌ ಹಾಗೂ ಎಟಿಎಸ್‌ ವಿಲೇಜ್‌ ಸೊಸೈಟಿಯಲ್ಲಿ ನೆಲೆಸಿರುವ ಸುಮಾರು 5 ಸಾವಿರ ಮಂದಿ ಭಾನುವಾರ ಬೆಳಿಗ್ಗೆ 7 ಗಂಟೆಗೆ ಬೇರೆಡೆ ಸ್ಥಳಾಂತರಗೊಳ್ಳಲಿದ್ದಾರೆ. ವಿದೇಶದ ಮೂವರು ತಜ್ಞರು, ಒಬ್ಬರು ಪೊಲೀಸ್‌ ಅಧಿಕಾರಿ, ಕಟ್ಟಡ ನೆಲಸಮಗೊಳಿಸುವಲ್ಲಿ ಪರಿಣತಿ ಹೊಂದಿರುವ ಭಾರತದ ಚೇತನ್ ದತ್ತ ಸ್ಥಳದಲ್ಲಿರಲಿದ್ದಾರೆ’ ಎಂದು ಎಡಿಫೈಸ್‌ ಎಂಜಿನಿಯರಿಂಗ್‌ ಪ್ರಾಜೆಕ್ಟ್‌ನ ಮ್ಯಾನೇಜರ್‌ ಮಯೂರ್‌ ಮೆಹ್ತಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.