ADVERTISEMENT

ಪಡಿತರ ಜೊತೆ ಆಧಾರ್ ಲಿಂಕ್: ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ

ಏಜೆನ್ಸೀಸ್
Published 24 ಫೆಬ್ರುವರಿ 2020, 9:49 IST
Last Updated 24 ಫೆಬ್ರುವರಿ 2020, 9:49 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್    

ನವದೆಹಲಿ:ಪಡಿತರ ಚೀಟಿಗೆ ಆಧಾರ್ ಲಿಂಕ್ ಆಗದಿದ್ದರೆ, ಪಡಿತರ ನೀಡದಿರುವ ಕುರಿತು ರಾಷ್ಟ್ರದ ಎಲ್ಲಾ ರಾಜ್ಯಗಳೂ ಹಾಗೂ ಕೇಂದ್ರಾಡಳಿತ ಪ್ರದೇಶಗಳೂತಮ್ಮ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಸೋಮವಾರ ಸೂಚನೆ ನೀಡಿದೆ.

ಇದು ಎರಡನೆ ಬಾರಿಗೆ ನೀಡುತ್ತಿರುವ ಸೂಚನೆಯಾಗಿದ್ದು, ನಾಲ್ಕು ವಾರಗಳ ಹಿಂದೆ ಪ್ರತಿಕ್ರಿಯೆ ಕೇಳಿ ನೋಟೀಸ್ ಜಾರಿ ಮಾಡಿತ್ತು.
ಆದರೆ, ಜಾರ್ಖಂಡ್, ನಾಗಾಲ್ಯಾಂಡ್ ಮತ್ತು ತಮಿಳುನಾಡು ಬಿಟ್ಟರೆ ಬೇರೆ ಯಾವುದೇ ರಾಜ್ಯಗಳು ಪ್ರತಿಕ್ರಿಯೆ ನೀಡಿಲ್ಲ. ಆಧಾರ್ ಕಾರ್ಡ್ ಜೊತೆ ಪಡಿತರ ಚೀಟಿ ಲಿಂಕ್ ಮಾಡದಿದ್ದರೆ, ಆಹಾರ ಪದಾರ್ಥಗಳನ್ನು ನಿರಾಕರಿಸಿದ್ದರಿಂದ ಉತ್ತರ ಭಾರತದಲ್ಲಿ ಜನರು ಹಸಿವಿನಿಂದ ಬಳಲುತ್ತಿದ್ದರು.ಕೆಲವು ಕಡೆ ಸಾವುಸಂಭವಿಸಿದ್ದು ವರದಿಯಾಗಿತ್ತು.

ಈ ಕುರಿತು ಸುಪ್ರೀಂಕೋರ್ಟ್‌‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ಪಡಿತರ ನೀಡುವ ಕುರಿತು ಯಾವ ಕ್ರಮ ಕೈಗೊಂಡಿದ್ದೀರಿ ಎಂಬುದರ ಕುರಿತು ಪ್ರತಿಕ್ರಿಯೆ ನೀಡುವಂತೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.