ADVERTISEMENT

ಅಯೋಧ್ಯೆ ತೀರ್ಪು ಶನಿವಾರವೇ ಪ್ರಕಟ ಯಾಕೆ?

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 10:25 IST
Last Updated 9 ನವೆಂಬರ್ 2019, 10:25 IST
Supreme Court
Supreme Court   

ನವದೆಹಲಿ: ದೇಶಾದ್ಯಂತ ಬಹುನಿರೀಕ್ಷಿತ ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ಕುರಿತಂತೆ ಸುಪ್ರೀಂ ಕೋರ್ಟ್ ಇಂದು ತೀರ್ಪು ಪ್ರಕಟಿಸಲಿದ್ದು, ಮುಂದಿನ ವಾರ ಪ್ರಕಟಗೊಳ್ಳಬೇಕಿದ್ದ ತೀರ್ಪು ಶನಿವಾರವೇ ಏಕೆ ಪ್ರಕಟ ಮಾಡಲಾಯಿತು ಎಂಬುದರಕುರಿತಾದ ಮಾಹಿತಿ ಇಲ್ಲಿದೆ.

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಇದೇ ತಿಂಗಳ 17 ರಂದು ನಿವೃತ್ತಿ ಹೊಂದಲಿದ್ದಾರೆ. ಗೊಗೊಯ್ ಅವರ ನಿವೃತ್ತಿಗೂ ಮುನ್ನವೇ ತೀರ್ಪು ಪ್ರಕಟವಾಗುವ ನಿರೀಕ್ಷೆಯಿತ್ತು. ಅದರಂತೆ ವಿಚಾರಣೆ ನಂತರ ಸುಪ್ರೀಂ ಕೋರ್ಟ್ ಅಯೋಧ್ಯೆ ತೀರ್ಪನ್ನು ಕಾಯ್ದಿರಿಸಿತ್ತು.

ಸುಪ್ರೀಂ ಕೋರ್ಟ್ ಯಾವಾಗ ಬೇಕಾದರು ಪ್ರಕರಣವನ್ನು ಕೈಗೆತ್ತಿಕೊಳ್ಳಬಹುದು, ವಿಚಾರಣೆ ಆಲಿಸಬಹುದು ಮತ್ತು ತೀರ್ಪನ್ನು ನೀಡಬಹುದು. ಅದರಂತೆ ಗೊಗೊಯ್ ನಿವೃತ್ತಿ ಹೊಂದುತ್ತಿರುವ ನವೆಂಬರ್ 17ರಂದು ಭಾನುವಾರ. ನವೆಂಬರ್ 16ರಂದು ಶನಿವಾರ ರಜಾದಿನ. ಆದರೆ ಸಾಮಾನ್ಯವಾಗಿ ಯಾವುದೇ ಪ್ರಮುಖ ಪ್ರಕರಣದ ತೀರ್ಪನ್ನು ರಜಾದಿನಗಳಲ್ಲಿ ನೀಡಲಾಗುವುದಿಲ್ಲ. ನ್ಯಾಯಮೂರ್ತಿಗಳು ನಿವೃತ್ತರಾಗುವ ಹಿಂದಿನ ದಿನ ಮಹತ್ವದ ತೀರ್ಪನ್ನು ನೀಡುವ ಪರಿಪಾಠ ಇಲ್ಲ.

ADVERTISEMENT

ನವೆಂಬರ್ 15 ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ಅವರ ಕೊನೆಯ ಕೆಲಸದ ದಿವಾಗಿರುತ್ತದೆ. ಹೀಗಾಗಿಯೇ ಇದೇ 14 ಮತ್ತು 15 ರಂದು ಗೊಗೊಯ್ ನೇತೃತ್ವದ ಸಾಂವಿಧಾನಿಕ ನ್ಯಾಯಪೀಠವು ಪ್ರಕರಣವನ್ನು ವಿಚಾರಣೆ ಒಳಪಡಿಸಬಹುದು ಎಂಬ ಊಹಾಪೋಹವಿತ್ತು.

ಒಂದು ವೇಳೆ ನ್ಯಾಯಾಲಯವು ತೀರ್ಪನ್ನು ಮರುದಿನ ಪ್ರಕಟಿಸಿದ್ದೇ ಆದಲ್ಲಿ ದೂರುದಾರರು ಮತ್ತು ಪ್ರತಿವಾದಿಗಳಲ್ಲಿ ಒಬ್ಬರು ತೀರ್ಪನ್ನು ಮರುಪರಿಶೀಲಿಸುವಂತೆ ನ್ಯಾಯಾಲಯವನ್ನು ಕೋರುತ್ತಾರೆ. ಆಗ ಈ ಪ್ರಕ್ರಿಯೆಯು ಮತ್ತೆ ಒಂದು ಅಥವಾ ಎರಡು ದಿನಗಳನ್ನು ತೆಗೆದುಕೊಳ್ಳುತ್ತದೆ.

ಈ ಎಲ್ಲ ಕಾರಣಗಳಿಂದಾಗಿ ಅಯೋಧ್ಯ ತೀರ್ಪು ನವೆಂಬರ್ 14-15ಕ್ಕೂ ಮುನ್ನವೇ ಹೊರಬೀಳುತ್ತದೆ ಎನ್ನುವ ನಿರೀಕ್ಷೆಯಿತ್ತು. ಆದರೆ ಶುಕ್ರವಾರ ರಾತ್ರಿಯೇ ಶನಿವಾರ 10.30ಕ್ಕೆ ತೀರ್ಪನ್ನು ಪ್ರಕಟಿಸಲಾಗುತ್ತದೆ ಎಂದು ಘೋಷಿಸಲಾಯಿತು.

ಸೂಕ್ಷ್ಮ, ಭಾವನಾತ್ಮಕ ಮತ್ತು ನಂಬಿಕೆಗೆ ಸಂಬಂಧಿಸಿದ ವಿಚಾರದ ತೀರ್ಪನ್ನು ಪ್ರಕಟಿಸುವ ವಿಚಾರದಲ್ಲಿನ ದಿಢೀರ ನಿರ್ಧಾರದಿಂದಾಗಿ ಸಮಾಜದಲ್ಲಿ ಅವ್ಯವಸ್ಥೆ ಉಂಟಾಗದಂತೆ ಮತ್ತು ತೀರ್ಪಿನ ಪಾರದರ್ಶಕತೆಯನ್ನು ಕಾಪಾಡುವಲ್ಲಿ ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.