ADVERTISEMENT

ಜಾಮೀನು ಅರ್ಜಿ: ಕ್ರಿಮಿನಲ್‌ ಪೂರ್ವಾಪರ ಮಾಹಿತಿ ಕಡ್ಡಾಯ– ಸುಪ್ರೀಂ 

ಪಿಟಿಐ
Published 18 ಜುಲೈ 2025, 15:24 IST
Last Updated 18 ಜುಲೈ 2025, 15:24 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಆರೋಪಿಗಳು ಸಲ್ಲಿಸುವ ಜಾಮೀನು ಅರ್ಜಿಗಳಲ್ಲಿ ಅವರ ಹಿಂದಿನ ಕ್ರಿಮಿನಲ್‌ ಪೂರ್ವಾಪರಗಳ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂಬ ನಿಯಮವನ್ನು ದೇಶದ ಎಲ್ಲ ಹೈಕೋರ್ಟ್‌ಗಳು ಅಳವಡಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಸೂಚಿಸಿದೆ. 

ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಈ ಸಂಬಂಧ ರೂಪಿಸಿರುವ ನಿಯಮಗಳು ಮತ್ತು ಆದೇಶಗಳನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್‌, ಇದನ್ನು ಎಲ್ಲ ಹೈಕೋರ್ಟ್‌ಗಳು ಅಳವಡಸಿಕೊಳ್ಳಬೇಕು ಎಂದು ಹೇಳಿತು. 

ರಾಜಸ್ಥಾನ ಹೈಕೋರ್ಟ್‌ ನೀಡಿದ ಕಟ್ಟುನಿಟ್ಟಿನ ಆದೇಶಗಳ ವಿರುದ್ಧ ಜಿಲ್ಲಾ ನ್ಯಾಯಾಧೀಶರ ವೃಂದದ ನ್ಯಾಯಾಂಗ ಅಧಿಕಾರಿ ಕೌಶಲ್‌ ಸಿಂಗ್‌ ಅವರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಗೆ ಅನುಮತಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌, ಸಂಜಯ್‌ ಕರೋಲ್‌ ಮತ್ತು ಸಂದೀಪ್‌ ಮಹ್ತಾ ಅವರ ಪೀಠವು ಈ ಕುರಿತು ಸೂಚನೆ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.