ADVERTISEMENT

ತಪ್ಪೊಪ್ಪಿಗೆ ಆಧರಿಸಿ ಅಪರಾಧ ನಿರ್ಣಯಿಸಬಾರದು: ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 28 ಮೇ 2022, 14:20 IST
Last Updated 28 ಮೇ 2022, 14:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಕೊಲೆಯ ಅಪರಾಧವನ್ನು ಹೆಚ್ಚುವರಿ ನ್ಯಾಯಾಂಗ ತಪ್ಪೊಪ್ಪಿಗೆಯ ಆಧಾರದ ಮೇಲೆ ಮಾತ್ರ ನಿರ್ಧರಿಸಬಾರದು. ಏಕೆಂದರೆ ಅದು ದುರ್ಬಲ ಸಾಕ್ಷ್ಯವಾಗಿರುತ್ತದೆ. ಅದು ಸ್ವಾಭಾವಿಕವಾದ ಪುರಾವೆಗಳಿಂದ ಸಂಪೂರ್ಣ ದೃಢೀಕರಿಸಲ್ಪಡದ ಹೊರತು ಅಪರಾಧ ನಿರ್ಣಯದಲ್ಲಿ ಪರಿಗಣಿಸಬಾರದು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಬೆಲಾ ಎಂ.ತ್ರಿವೇದಿ ಅವರಿದ್ದ ಪೀಠವು,ಅಂತರ್ಜಾತಿ ವಿವಾಹವಾದ ದಂಪತಿಯ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಛತ್ತೀಸಗಡ ವ್ಯಕ್ತಿಗೆ ವಿಧಿಸಿದ್ದ ಶಿಕ್ಷೆ ರದ್ದುಪಡಿಸುವಾಗ, ಕಾನೂನಿನ ಸ್ಥಿತಿಗತಿಯನ್ನು ಈ ರೀತಿ ವಿಶ್ಲೇಷಿಸಿ,ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಯನ್ನು ಬಿಡುಗಡೆ ಮಾಡಿತು.

‘ಹೆಚ್ಚುವರಿ ನ್ಯಾಯಾಂಗ ತಪ್ಪೊಪ್ಪಿಗೆಯು ಸ್ವತಃ ದುರ್ಬಲ ಸಾಕ್ಷಿ ಎನಿಸಿದೆ. ಇದನ್ನು ಹೆಚ್ಚಿನ ಮುತುವರ್ಜಿಯಿಂದ ಪರೀಕ್ಷಿಸಬೇಕು. ಅದು ಸತ್ಯವಾಗಿರಬೇಕು ಮತ್ತು ಆತ್ಮವಿಶ್ವಾಸ ಪ್ರೇರೇಪಿಸಬೇಕು. ಅದು ಸಮಂಜಸವಾದ ಸಂದರ್ಭಗಳ ಸರಪಳಿಯಿಂದ ಬೆಂಬಲಿತವಾಗಿದ್ದರೆ ಮತ್ತು ಇತರ ಪ್ರಾಸಿಕ್ಯೂಷನ್ ಪುರಾವೆಗಳಿಂದ ದೃಢೀಕರಿಸಲ್ಪಟ್ಟಿದ್ದರೆ ಹೆಚ್ಚುವರಿ ನ್ಯಾಯಾಂಗದ ತಪ್ಪೊಪ್ಪಿಗೆಗೆ ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಸಾಕ್ಷ್ಯದ ಮೌಲ್ಯವಿರುತ್ತದೆ’ ಎಂದು ಪೀಠ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.