
ಸುಪ್ರೀಂ ಕೋರ್ಟ್
ನವದೆಹಲಿ: ಆಟಿಸಂನಿಂದ ಬಳಲುತ್ತಿರುವವರಿಗೆ ನಿಗದಿತ ಚಿಕಿತ್ಸಾಲಯಗಳನ್ನು ಹೊರತುಪಡಿಸಿ ಬೇರೆಡೆ ಸ್ಟೆಮ್ ಸೆಲ್ ಥೆರಪಿಯನ್ನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಅನುಮೋದಿತ ಕ್ಲಿನಿಕ್ ಹೊರತುಪಡಿಸಿ ಹೊರಗೆ ಸ್ಟೆಮ್ ಸೆಲ್‌ಗಳ ಪ್ರತಿಯೊಂದು ಬಳಕೆಯನ್ನು ಅನೈತಿಕ ಹಾಗೂ ದುಷ್ಕೃತ್ಯ ಎಂಬುದಾಗಿ ಪರಿಗಣಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು ತಿಳಿಸಿದೆ.
‘ತಮ್ಮ ಯೋಗಕ್ಷೇಮಕ್ಕೆ ಹಾನಿಕಾರಕ ಎನ್ನುವ ಆತಂಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಬಿಡಲು ಸಾಧ್ಯವಿಲ್ಲ’ ಎಂದಿದೆ.
‘ಆಟಿಸಂಗೆ ಸ್ಟೆಮ್ ಸೆಲ್ ಚಿಕಿತ್ಸೆಯು ಕ್ಲಿನಿಕಲ್ ರೂಪದಲ್ಲಿ ವಾಣಿಜ್ಯವಾಗಿ ಮುಂದುವರಿಯಲು ಸಾಧ್ಯವಿಲ್ಲ’ ಎಂಬ ನಮ್ಮ ನಿರ್ಧಾರದ ಬಗ್ಗೆ ನಮಗೆ ಸ್ಪಷ್ಟತೆಯಿದೆ ಎಂದೂ ನ್ಯಾಯಪೀಠ ತಿಳಿಸಿದೆ.
ಏಮ್ಸ್ ಹಾಗೂ ರಾಷ್ಟ್ರೀಯ ವೈದ್ಯಕೀಯ ಮಂಡಳಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಉತ್ತಮ ಪರಿಹಾರ ಕಂಡುಕೊಳ್ಳಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಗೆ ನಿರ್ದೇಶಿಸುತ್ತೇವೆ ಎಂದಿದೆ.
ಆಟಿಸಂಗೆ ಸ್ಟೆಮ್ ಸೆಲ್ ಥೆರಪಿ ನೀಡುವುದಾಗಿ ಹಲವು ಚಿಕಿತ್ಸಾಲಯಗಳು ದೇಶದಾದ್ಯಂತ ವ್ಯಾಪಕ ಪ್ರಚಾರ ನಡೆಸುತ್ತಿರುವುದಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ತೀರ್ಪು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.