ನವದೆಹಲಿ: ತನ್ನ ಮುಖ್ಯ ಆವರಣವನ್ನು ಹೆಚ್ಚಿನ ಭದ್ರತಾ ವಲಯವೆಂದು ಘೋಷಿಸಿರುವ ಸುಪ್ರೀಂ ಕೋರ್ಟ್, ಫೋಟೋ ತೆಗೆಯುವುದು, ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುವುದನ್ನು ನಿರ್ಬಂಧ ವಿಧಿಸಿ ಕ್ರಮ ಕೈಗೊಂಡಿದೆ.
ಸೆಪ್ಟೆಂಬರ್ 10ರಂದು ಸುತ್ತೋಲೆ ಹೊರಡಿಸಿದ್ದು, ಮಾಧ್ಯಮ ಪ್ರತಿನಿಧಿಗಳು ಸಂದರ್ಶನ ನಡೆಸಲು ಹಾಗೂ ನೇರ ಪ‍್ರಸಾರಕ್ಕಾಗಿಯೇ ಕಡಿಮೆ ಭದ್ರತಾ ಪ‍್ರದೇಶವಾಗಿರುವ ನಿರ್ದಿಷ್ಟ ಪ‍್ರದೇಶವನ್ನು ಗುರುತಿಸಲಾಗಿದೆ.
‘ಹೆಚ್ಚು ಭದ್ರತಾ ವಲಯವಾಗಿ ಘೋಷಣೆ ಮಾಡಿದ ಜಾಗಗಳಲ್ಲಿ ಛಾಯಾಚಿತ್ರ, ವಿಡಿಯೊ ತೆಗೆಯಲು ಮೊಬೈಲ್, ಕ್ಯಾಮೆರಾ, ಟ್ರೈಪಾಡ್ ಬಳಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅಧಿಕೃತ ಬಳಕೆಗೆ ಹೊರತುಪಡಿಸಿ, ವಿಡಿಯೊಗ್ರಾಫಿ, ರೀಲ್ಸ್ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ’ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
‘ಒಂದೊಮ್ಮೆ ಈ ನಿಯಾಮವಳಿಗಳನ್ನು ಅಡ್ವೊಕೇಟ್, ಅರ್ಜಿದಾರ, ಇಂಟರ್ನ್, ಲಾ ಕರ್ಕ್ ಉಲ್ಲಂಘಿಸುವುದು ಕಂಡುಬಂದರೆ, ಬಾರ್ ಅಸೋಸಿಯೇಷನ್, ರಾಜ್ಯ ಬಾರ್ ಕೌನ್ಸಿಲ್‌ಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಮಾಧ್ಯಮ ಪ್ರತಿನಿಧಿಗಳು ಉಲ್ಲಂಘಿಸಿದರೆ, ಅಂತಹವರಿಗೆ ಒಂದು ತಿಂಗಳ ಹೆಚ್ಚು ಭದ್ರತಾ ವಲಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಲಾಗುತ್ತದೆ’ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.