ADVERTISEMENT

ಮಲಂಕಾರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ನ ಮುಖ್ಯಸ್ಥ ನಿಧನ

ಪಿಟಿಐ
Published 12 ಜುಲೈ 2021, 5:25 IST
Last Updated 12 ಜುಲೈ 2021, 5:25 IST
ಬಸೆಲಿಯೊಸ್ ಮಾರ್ಥೋಮಾ ಪಾಲೋಸ್ II            –ಟ್ವಿಟರ್‌ ಚಿತ್ರ
ಬಸೆಲಿಯೊಸ್ ಮಾರ್ಥೋಮಾ ಪಾಲೋಸ್ II            –ಟ್ವಿಟರ್‌ ಚಿತ್ರ   

ಕೊಟ್ಟಾಯಂ (ಕೇರಳ): ಮಲಂಕಾರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್ ಆಫ್ ಇಂಡಿಯಾದ ಸರ್ವೋಚ್ಚ ಮುಖ್ಯಸ್ಥ ಬಸೆಲಿಯೊಸ್ ಮಾರ್ಥೋಮಾ ಪಾಲೋಸ್ II (74) ಅವರು ಸೋಮವಾರ ಮುಂಜಾನೆ ನಿಧನರಾದರು ಎಂದು ಚರ್ಚ್‌ನ ವಕ್ತಾರರು ತಿಳಿಸಿದರು.

‘ಬಸೆಲಿಯೊಸ್ ಅವರು ಪತ್ತನಂತಿಟ್ಟ ಜಿಲ್ಲೆಯ ಪರುಮಾಲ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ ನಂತರದ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮುಂಜಾನೆ 2.35ಕ್ಕೆ ಆಸ್ಪತ್ರೆಯಲ್ಲೇ ಕೊನೆ ಉಸಿರೆಳೆದರು’ ಎಂದು ಅವರು ಹೇಳಿದರು.

ಬಸೆಲಿಯಾಸ್‌ ಅವರು 2019 ಡಿಸೆಂಬರ್‌ನಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈ ವರ್ಷ ಫೆಬ್ರುವರಿಯಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದರು.

ಬಸೆಲಿಯೊಸ್ ಮಾರ್ಥೋಮಾ ಪಾಲೋಸ್ II ಅವರು ಮಲಂಕಾರದ 8ನೇ ಕ್ಯಾಥೊಲಿಕಾಸ್‌ ಆಗಿದ್ದರು. 2010ರಲ್ಲಿ ಪೂರ್ವ ಮತ್ತು ಮಲಂಕಾರ ಮೆಟ್ರೊಪಾಲಿಟನ್‌ ಕ್ಯಾಥೊಲಿಕಾಸ್‌ ಆಗಿ ಅಧಿಕಾರ ಸ್ವೀಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.