ADVERTISEMENT

ಬೆಂಕಿ ದುರಂತ: ಕೋಚಿಂಗ್‌ ಸೆಂಟರ್ ಮಾಲೀಕ ಬಂಧನ

ಮೃತ ವಿದ್ಯಾರ್ಥಿಗಳ ಸಂಖ್ಯೆ 23ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2019, 18:21 IST
Last Updated 25 ಮೇ 2019, 18:21 IST
   

ಅಹಮದಾಬಾದ್‌: ಸೂರತ್‌ನಲ್ಲಿನ ಬೆಂಕಿ ದುರಂತಕ್ಕೆ ಸಂಬಂಧಿಸಿದಂತೆ ಕೋಚಿಂಗ್‌ ಸೆಂಟರ್‌ನ ವ್ಯವಸ್ಥಾಪಕನನ್ನುಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಕಟ್ಟಡದ ಬಿಲ್ಡರ್‌ಗಳು ನಾಪತ್ತೆಯಾಗಿದ್ದಾರೆ.

ಸೂರತ್‌ನ ಸಾರ್ಥನಾ ಪ್ರದೇಶದ ವಾಣಿಜ್ಯ ಸಂಕೀರ್ಣದ ನಾಲ್ಕನೇ ಮಹಡಿಯಲ್ಲಿದ್ದ ಕೋಚಿಂಗ್‌ ಸೆಂಟರ್‌ನಲ್ಲಿ ಶುಕ್ರವಾರ ಬೆಂಕಿ ಅವಘಡ ಸಂಭವಿಸಿ 19 ವಿದ್ಯಾರ್ಥಿಗಳು ಸಾವಿಗೀಡಾಗಿದ್ದರು. ಶನಿವಾರ ಇನ್ನೂ ನಾಲ್ವರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ಇದರಿಂದ, ಸಾವಿಗೀಡಾದವರ ಸಂಖ್ಯೆ 23ಕ್ಕೆ ಏರಿದೆ. ಇನ್ನೂ ಆರು ವಿದ್ಯಾರ್ಥಿಗಳ ಸ್ಥಿತಿ ಗಂಭೀರ
ವಾಗಿದೆ. ಮೂರು ವರ್ಷದ ಮಗುಸಹ ಬೆಂಕಿಯಲ್ಲಿ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೂರತ್‌ ಅಪರಾಧ ವಿಭಾಗ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ವ್ಯವಸ್ಥಾಪಕ ಭಾರ್ಗವ್‌ ಭೂತಾನಿಯನ್ನು ಶನಿವಾರ ಮುಂಜಾನೆ ಬಂಧಿಸಿದೆ.

ADVERTISEMENT

ಬೆಂಕಿ ದುರಂತದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಸಂಪೂರ್ಣ ವರದಿ ಸಲ್ಲಿಸುವಂತೆಗುಜರಾತ್‌ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.