ADVERTISEMENT

ತೆಲಂಗಾಣ ಮುಖ್ಯಮಂತ್ರಿ ಭೇಟಿಯಾದ ಶರಣಾಗತ ನಕ್ಸಲ್

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 15:55 IST
Last Updated 27 ಫೆಬ್ರುವರಿ 2026, 15:55 IST
ರೇವಂತ ರೆಡ್ಡಿ
ರೇವಂತ ರೆಡ್ಡಿ   

ಹೈದರಾಬಾದ್‌ (ಪಿಟಿಐ): ಶರಣಾಗತರಾಗಿದ್ದ ನಕ್ಸಲ್‌ ನಾಯಕರಾದ ತಿಪ್ಪೇರಿ ತಿರುಪತಿ ಅಲಿಯಾಸ್‌ ದೇವುಜಿ, ಮಲ್ಲಾ ರಾಜಿ ರೆಡ್ಡಿ ಮತ್ತು ಇತರ ನಾಲ್ವರು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಅವರನ್ನು ಶುಕ್ರವಾರ ಭೇಟಿಯಾದರು.

ಸರ್ಕಾರದ ಸಲಹೆಗಾರರಾದ ಕೆ. ಕೇಶವರಾವ್, ವೆಂ ನರೇಂದ್ರ ರೆಡ್ಡಿ, ಮುಖ್ಯ ಕಾರ್ಯದರ್ಶಿ ರಾಮಕೃಷ್ಣ ರಾವ್, ಡಿಜಿಪಿ ಶಿವಧರ್ ರೆಡ್ಡಿ, ಎಡಿಜಿ (ಗುಪ್ತಚರ) ವಿಜಯ್ ಕುಮಾರ್ ಮತ್ತು ಎಸ್‌ಐಬಿ ಐಜಿ ಸುಮತಿ ಸಭೆಯಲ್ಲಿದ್ದರು ಎಂದು ಪ್ರಕಟಣೆ ತಿಳಿಸಿದೆ.

ನಕ್ಸಲರಾದ ಪುಲ್ಲೂರಿ ಪ್ರಸಾದ್ ರಾವ್, ಪೊತುಲ ಕಲ್ಪನಾ, ಬಡೆ ಚೊಕ್ಕಾ ರಾವ್, ನೂನ್ ನರಸಿಂಹ ರೆಡ್ಡಿ ಸಹ ಮುಖ್ಯಮಂತ್ರಿಯನ್ನು ಭೇಟಿಯಾದರು.

ADVERTISEMENT

ದೇವುಜಿ ಮತ್ತು ಇತರ ಮೂವರು ಫೆ. 24ರಂದು ತೆಲಂಗಾಣ ಪೊಲೀಸರಿಗೆ ಶರಣಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.