ADVERTISEMENT

ರಾಜ್ಯಸಭೆ ಉಪ ಚುನಾವಣೆ: ಸುಶೀಲ್‌ ಮೋದಿ ನಾಮಪತ್ರ

ಪಿಟಿಐ
Published 2 ಡಿಸೆಂಬರ್ 2020, 12:33 IST
Last Updated 2 ಡಿಸೆಂಬರ್ 2020, 12:33 IST
ನಾಮಪತ್ರ ಸಲ್ಲಿಸಿದ ಬಳಿಕ ಸುಶೀಲ್‌ ಕುಮಾರ್‌ ಮೋದಿ (ಬಲ ತುದಿ) ವಿಜಯದ ಸಂಕೇತ ತೋರಿದರು. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಾಗೂ ಇತರ ಮುಖಂಡರು ಜೊತೆಗಿದ್ದರು –ಪಿಟಿಐ ಚಿತ್ರ
ನಾಮಪತ್ರ ಸಲ್ಲಿಸಿದ ಬಳಿಕ ಸುಶೀಲ್‌ ಕುಮಾರ್‌ ಮೋದಿ (ಬಲ ತುದಿ) ವಿಜಯದ ಸಂಕೇತ ತೋರಿದರು. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಾಗೂ ಇತರ ಮುಖಂಡರು ಜೊತೆಗಿದ್ದರು –ಪಿಟಿಐ ಚಿತ್ರ   

ಪಟ್ನಾ: ರಾಜ್ಯಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿಸುಶೀಲ್‌ ಕುಮಾರ್‌ ಮೋದಿ ಅವರು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.

ಈ ವೇಳೆ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಉಪ ಮುಖ್ಯಮಂತ್ರಿ ತಾರ್‌ಕಿಶೋರ್‌ ಪ್ರಸಾದ್‌, ಮಾಜಿ ಮುಖ್ಯಮಂತ್ರಿ ಜಿತನ್‌ ರಾಂ ಮಾಂಝಿ ಹಾಗೂ ಬಿಜೆಪಿಯ ಹಿರಿಯ ಮುಖಂಡರು ಸುಶೀಲ್‌ ಜೊತೆಗಿದ್ದರು.‌

ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ ನೇತೃತ್ವದ ಹಿಂದಿನ ಸರ್ಕಾರಗಳಲ್ಲಿ ಸುಶೀಲ್‌ ಮೋದಿ ಉಪಮುಖ್ಯಮಂತ್ರಿಯಾಗಿದ್ದರು. ಬಿಜೆಪಿ ಹೈಕಮಾಂಡ್‌ ಸೂಚನೆ ಮೇರೆಗೆ ಅವರು ಈ ಬಾರಿ ಈ ಹುದ್ದೆ ಬಿಟ್ಟುಕೊಟ್ಟಿದ್ದರು.

ADVERTISEMENT

ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ರಾಮ್‌ವಿಲಾಸ್‌ ಪಾಸ್ವಾನ್‌ ನಿಧನದಿಂದ ತೆರವಾದ ಸ್ಥಾನಕ್ಕೆ ಇದೇ 14ರಂದು ಚುನಾವಣೆ ನಿಗದಿಯಾಗಿದೆ. ಮಹಾ ಘಟಬಂಧನ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ಅವಿರೋಧ ಆಯ್ಕೆಯಾಗುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.