ADVERTISEMENT

ಕಾಶ್ಮೀರಿ ಪಂಡಿತರಿಗೆ 2 ಸ್ಥಾನ ಮೀಸಲಿಡಲು ಸುಶಿಲ್‌ ಮೋದಿ ಬೇಡಿಕೆ

ಐಎಎನ್ಎಸ್
Published 9 ಡಿಸೆಂಬರ್ 2022, 7:02 IST
Last Updated 9 ಡಿಸೆಂಬರ್ 2022, 7:02 IST
   

ನವದೆಹಲಿ: ಕ್ಷೇತ್ರ ಮರು ವಿಂಗಡಣೆ ಆಯೋಗದ ಶಿಫಾರಸಿನಂತೆ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರಿಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ 2 ಸ್ಥಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು–ಕಾಶ್ಮೀರದಿಂದ ಭಾರತದಲ್ಲಿ ವಾಸಿಸುತ್ತಿರುವವರಿಗೆ ಒಂದು ಸ್ಥಾನ ಮೀಸಲಿಡಬೇಕೆಂದು ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಸುಶಿಲ್‌ ಕುಮಾರ ಮೋದಿ ಆಗ್ರಹಿಸಿದ್ದಾರೆ.


ಕಳೆದ 3 ದಶಕಗಳಿಂದ ಕಾಶ್ಮೀರಿ ಪಂಡಿತರು ಸಾಕಷ್ಟು ನೋವು ಅನುಭವಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮರುವಿಂಗಡಣೆ ಕಾನೂನಿನಲ್ಲಿ ಈ ಸಂಬಂಧ ತಿದ್ದುಪಡಿಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.


ಕ್ಷೇತ್ರ ಮರು ವಿಂಗಡಣೆ ಆಯೋಗದ ಶಿಫಾರಸಿನಂತೆ ಪುದುಚೇರಿ ವಿಧಾನಸಭೆಯಿಂದ ನಾಮನಿರ್ದೇಶನಗೊಳ್ಳುವ ಸದಸ್ಯರಂತೆ ಈ ಸದಸ್ಯರ ಅಧಿಕಾರವಿರಬೇಕು ಎಂದು ಅವರು ಹೇಳಿದ್ದಾರೆ.

ADVERTISEMENT


ಕ್ಷೇತ್ರ ಮರುವಿಂಗಡಣೆ ಆಯೋಗದ ಶಿಫಾರಸಿನಂತೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ 114 ಸ್ಥಾನಗಳನ್ನು ಹೊಂದಿರಲಿದ್ದು, ಅದರಲ್ಲಿ 90 ಸ್ಥಾನವನ್ನು ಜನರು ಆಯ್ಕೆ ಮಾಡುತ್ತಾರೆ. 47 ಕಾಶ್ಮೀರ ಕಣಿವೆಯಿಂದ, 43 ಜಮ್ಮು ಭಾಗದಿಂದ. 24 ಸ್ಥಾನಗಳು ಪಾಕ್‌ ಆಕ್ರಮಿತ ಕಾಶ್ಮೀರದ ಭಾಗಗಳಿಗೆ ಮೀಸಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.