ADVERTISEMENT

ಜಮ್ಮು: ಶಂಕಿತ ಎಲ್‌ಇಟಿ ಉಗ್ರನ ಬಂಧನ

ಪಿಟಿಐ
Published 20 ಫೆಬ್ರುವರಿ 2022, 12:43 IST
Last Updated 20 ಫೆಬ್ರುವರಿ 2022, 12:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭದೇರ್ವಾ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಥಾತ್ರಿ ಎಂಬಲ್ಲಿ ವಾಹನ ತಪಾಸಣೆ ನಡೆಸುವ ವೇಳೆ ಲಷ್ಕರ್‌-ಎ–ತೈಬಾಗೆ (ಎಲ್‌ಇಟಿ) ಸೇರಿದ ಶಂಕಿತ ಉಗ್ರನನ್ನು ಬಂಧಿಸಲಾಗಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.

ಸಾಜನ್‌–ಬರ್ಜನಿ ಗ್ರಾಮದ ನಿವಾಸಿ ಆದಿಲ್‌ ಇಕ್ಬಾಲ್‌ ಬಟ್‌ ಬಂಧಿತ ಆರೋಪಿ. ಬಂಧಿತನಿಂದ ಪಿಸ್ತೂಲ್‌ ಮತ್ತು ಎರಡು ನಿಯತಕಾಲಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಈತ ಪಾಕಿಸ್ತಾನದ ಮೊಹದ್ ಅಮಿನ್‌ನಿಂದ ಕಾರ್ಯಪ್ರವೃತ್ತನಾಗಿದ್ದ ಎಂದುಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಥಾತ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT