ADVERTISEMENT

ದೆಹಲಿ: ಶಂಕಿತ ಮಂಕಿಪಾಕ್ಸ್‌ ರೋಗಿಗೆ ನೆಗೆಟಿವ್‌ ವರದಿ

ಪಿಟಿಐ
Published 28 ಜುಲೈ 2022, 13:58 IST
Last Updated 28 ಜುಲೈ 2022, 13:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಇಲ್ಲಿನ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಾಗಿದ್ದ ಶಂಕಿತ ಮಂಕಿಪಾಕ್ಸ್‌ ರೋಗಿಗೆ ಪರೀಕ್ಷೆಯ ನಂತರ ನೆಗೆಟಿವ್‌ ವರದಿ ಬಂದಿದ್ದು, ಆತನನ್ನು ಮರಳಿ ಮನೆಗೆ ಕಳುಹಿಸಲಾಗಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸುರೇಶ್‌ ಕುಮಾರ್ ತಿಳಿಸಿದ್ದಾರೆ.

‘ಎರಡು ದಿನಗಳ ಹಿಂದೆ ಗಾಜಿಯಾಬಾದ್‌ ನಿವಾಸಿಯಾದ ಶಂಕಿತ ರೋಗಿಗೆ ತೀವ್ರ ಜ್ವರ ಹಾಗೂ ಚರ್ಮದ ಕಾಯಿಲೆ ಕಾಣಿಸಿಕೊಂಡ ಬಳಿಕ ಕಣ್ಗಾವಲು ತಂಡ ಅವರನ್ನು ಆಸ್ಪತ್ರೆಗೆ ಕರೆತಂದಿತ್ತು. ಒಂದು ತಿಂಗಳ ಹಿಂದೆ ಅವರು ಪ್ಯಾರಿಸ್‌ಗೆ ಹೋಗಿ ಬಂದಿದ್ದರು. ಈ ಶಂಕಿತ ರೋಗಿಗೆ ಚಿಕನ್‌ಪಾಕ್ಸ್‌ ಸೋಂಕು ತಗುಲಿರುವುದು ತಿಳಿದುಬಂದಿದೆ. ಸದ್ಯ ದೆಹಲಿಯಲ್ಲಿ ಈಗ ಕೇವಲ ಒಂದೇ ಒಂದು ಮಂಕಿಪಾಕ್ಸ್ ಪ್ರಕರಣ ಇದೆ’ ಎಂದು ಸುರೇಶ್‌ ಕುಮಾರ್‌ ಹೇಳಿದರು.

‘ದೆಹಲಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆಯಾದ ಮೊದಲ ರೋಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರಿಂದ ಮರು ಮಾದರಿಗಳನ್ನು ಸಂಗ್ರಹಿಸಿ, ಪುಣೆಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಗೆ ಕಳುಹಿಸಲಾಗಿದೆ’ ಎಂದೂ ತಿಳಿಸಿದರು.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.