ADVERTISEMENT

ಸಾಮೂಹಿಕ ಗಲಭೆ ಪ್ರಕರಣಗಳು ಸಾಂಕ್ರಾಮಿಕವಾಗಿವೆ: ಸ್ವರಾ ಭಾಸ್ಕರ್‌

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 5:11 IST
Last Updated 25 ಜುಲೈ 2019, 5:11 IST
   

ನವದೆಹಲಿ:ಕಟುವಾಸ್ತವಗಳನ್ನು ಕಂಡೂ ಕಾಣದಂತೆ ಬದುಕುವುದು ಕಷ್ಟ. ದೇಶದಲ್ಲಿ ಸಾಮೂಹಿಕ ದಾಳಿ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ ಎಂದು ಬಾಲಿವುಡ್‌ ನಟಿ ಸ್ವರಾ ಭಾಸ್ಕರ್ ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ನಡೆಯುತ್ತಿರುವ ಗುಂಪು ದಾಳಿ ಪ್ರಕರಣಗಳಬಗ್ಗೆಕಳವಳ ವ್ಯಕ್ತಪಡಿಸಿ 49 ಮಂದಿ ಪ್ರಸಿದ್ಧ ವ್ಯಕ್ತಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಪತ್ರ ಬರೆದಿದ್ದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಸ್ವರಾ ಈ ವಿಚಾರವನ್ನು ಉಲ್ಲೇಖಿಸಿ ಮಾತನಾಡಿದರು.

‘ಸಮೂಹ ದಾಳಿ ಪ್ರಕರಣಗಳುದೇಶದಲ್ಲಿ ಇಂದು ಸಾಂಕ್ರಾಮಿಕವಾಗಿವೆ. ಇಂತಹ ಕಟುವಾಸ್ತವಾಗಳನ್ನು ಕಂಡೂ ಕಾಣದಂತೆ ಇರುವುದನ್ನು ಸಾಧ್ಯದಿಲ್ಲ.ದೇಶದಲ್ಲಿ ನಡೆಯುತ್ತಿರುವ ದುರಂತ ಹಾಗೂ ಅದರ ಪರಿಣಾಮಗಳ ಬಗ್ಗೆ ಪ್ರಧಾನಿ ಅವರ ಗಮನ ಸೆಳೆಯಲು ಕಲಾವಿದರು, ಸಿನಿಮಾ ನಿರ್ಮಾಪಕರು, ಬರಹಗಾರರು, ಸಂಗೀತಗಾರರು ಒಂದಾಗಿರುವುದು ಶ್ಲಾಘನೀಯ’ ಎಂದರು.

ADVERTISEMENT

‘ನಾನು ಕಳೆದ 3–4 ವರ್ಷಗಳಲ್ಲಿ ಸಾಕಷ್ಟು ಬಾರಿ ಈ ವಿಚಾರದ ಬಗ್ಗೆ ಮಾತನಾಡಿದ್ದೇನೆ. ಮಾತ್ರವಲ್ಲ ಕಾನೂನು ಕ್ರಮಕ್ಕಾಗಿಯೂ ಒತ್ತಾಯಿಸಿದ್ದೇನೆ. ಆದರೆ, ಪರಿಸ್ಥಿತಿ ಸುಧಾರಣೆ ಆಗುವುದಕ್ಕಿಂತ ಮತ್ತಷ್ಟು ಹದಗೆಟ್ಟಿದೆ. ಇಂತಹ ಪ್ರಕರಣಗಳು ದಾಖಲಾದಾಗ ಜಿಲ್ಲಾಡಳಿತಗಳು ಸಂಪೂರ್ಣ ಹೊಣೆಹೊರಬೇಕಾಗುತ್ತದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಠಿಣ ಕಾನೂನಿನ ಅಗತ್ಯವಿದೆ. ಪ್ರಧಾನಿ ಮೋದಿ ಅವರು ಈ ಬಗ್ಗೆ ಗಮನಹರಿಸಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

‘ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ರಾಜಕೀಯ ಪ್ರೇರಣೆ ಇದೆಯೇ’ ಎಂದು ಪ್ರಶ್ನಿಸಿದ ಪತ್ರಕರ್ತರಿಗೆ, ‘ರಾಜಕೀಯ ಸೇರಿದ್ದರೇನಂತೆ. ಅದು ತಪ್ಪಲ್ಲ. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆ. ಎಲ್ಲ ಬಗೆಯ ಚಿಂತನೆಗಳನ್ನೂ ಸ್ವಾಗತಿಸಬೇಕಿದೆ’ ಎಂದು ಉತ್ತರಿಸಿದರು.

‘ಸಾಮೂಹಿಕ ದಾಳಿಯಂತಹ ದುಷ್ಕೃತ್ಯದ ವಿರುದ್ಧ ಯಾರಾದರು ಮಾತನಾಡಿದಾಗ ಅವರ ವೈಯಕ್ತಿಕ ಚಿಂತನೆಗಳನ್ನು ಪರಿಗಣಿಸಬಾರದು. ಪ್ರಧಾನಿಗೆ ಪತ್ರ ಬರೆದಿರುವ ನಿರ್ಧಾರವನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ’ ಎಂದು ಬೆಂಬಲ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.