ADVERTISEMENT

ತಬ್ಲೀಗಿ ಜಮಾತ್ ಕಾರ್ಯಕ್ರಮದ ನಂತರ ಹಲವರಿಗೆ ಸೋಂಕು: ಕೇಂದ್ರ ಗೃಹ ಸಚಿವಾಲಯ

ಪಿಟಿಐ
Published 21 ಸೆಪ್ಟೆಂಬರ್ 2020, 6:53 IST
Last Updated 21 ಸೆಪ್ಟೆಂಬರ್ 2020, 6:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೆಹಲಿಯಲ್ಲಿ ಈ ವರ್ಷದ ಮಾರ್ಚ್ ನಲ್ಲಿ ನಡೆದಿದ್ದ ತಬ್ಲೀಗಿ ಜಮಾತ್ ಕಾರ್ಯಕ್ರಮವು 'ಹಲವರಿಗೆ' ಕೊರೊನಾ ಸೋಂಕು ಹರಡಲು ಕಾರಣವಾಯಿತು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಗೃಹ ಖಾತೆ ರಾಜ್ಯ ಸಚಿವ ಜಿ.ಕಿಷನ್ ರೆಡ್ಡಿ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದು, ಮಾರ್ಚ್ 29ರ ನಂತರ ದೆಹಲಿ ಪೊಲೀಸರು 233 ತಬ್ಲೀಗಿಜಮಾತ್ ಸದಸ್ಯರನ್ನು ಬಂಧಿಸಿ, 2,631 ಜನರನ್ನು ತೆರವು ಮಾಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ, ಜಮಾತ್ಮುಖ್ಯಸ್ಥ ಮೌಲಾನಾ ಮೊಹಮ್ಮದ್ ಸಾದ್ ಅವರ ವಿರುದ್ಧ ತನಿಖೆಯು ಪ್ರಗತಿಯಲ್ಲಿದೆ. ದೆಹಲಿ ಪೊಲೀಸರು ಹೇಳಿರುವಂತೆ, ಕೋವಿಡ್ಕುರಿತಾದ ನಿರ್ಬಂಧ ವಿಧಿಸಲಾಗಿದ್ದರೂಸಮಾವೇಶ ನಡೆಸಲಾಗಿತ್ತು. ಅಲ್ಲಿ ಪರಸ್ಪರ ಅಂತರವೂ ಸೇರಿದಂತೆ ಮುಂಜಾಗ್ರತೆ ವಹಿಸಿರಲಿಲ್ಲ. ಇದು ಹಲವರಿಗೆ ಸೋಂಕು ಹರಡಲು ಕಾರಣವಾಯಿತು ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.