ತಹವ್ವುರ್ ಹುಸೇನ್ ರಾಣಾ
ನವದೆಹಲಿ: ಮುಂಬೈ ಮೇಲಿನ ಭಯೋತ್ಪಾದಕ ದಾಳಿ ಪ್ರಕರಣದ ಆರೋಪಿ ತಹವ್ವುರ್ ಹುಸೇನ್ ರಾಣಾಗೆ ಸಹೋದರನ ಜೊತೆ ದೂರವಾಣಿ ಮೂಲಕ ಈ ತಿಂಗಳಲ್ಲಿ ಮೂರು ಬಾರಿ ಮಾತನಾಡಲು ಅವಕಾಶ ನೀಡಿ ದೆಹಲಿಯ ವಿಶೇಷ ನ್ಯಾಯಾಲಯ ಬುಧವಾರ ಆದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಖಾಸಗಿ ವಕೀಲರ ನೇಮಕ ವಿಚಾರ ಚರ್ಚಿಸುವ ಸಲುವಾಗಿ ಕೋರ್ಟ್ ಈ ಅವಕಾಶ ನೀಡಿದೆ ಎಂದು ತಿಳಿಸಿವೆ.
ಇದೇ ಸಂದರ್ಭದಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದರ್‌ಜಿತ್ ಸಿಂಗ್ ಅವರು, ರಾಣಾ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್ 8ರವರೆಗೆ ವಿಸ್ತರಿಸಿದರು.
ರಾಣಾ ಮಾತುಕತೆಯ ದೂರವಾಣಿ ಕರೆಯನ್ನು ದಾಖಲಿಸಬೇಕು. ಮಾತುಕತೆಯು ಜೈಲು ಅಧಿಕಾರಿಗಳ ಉಪಸ್ಥಿತಿಯಲ್ಲಿಯೇ ನಡೆಯಬೇಕು ಮತ್ತು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿಯೇ ಇರಬೇಕು ಎಂಬ ನಿರ್ದೇಶನ ನೀಡಿದರು ಎಂದು ಮೂಲಗಳು ಹೇಳಿವೆ.
2008ರ ನವೆಂಬರ್ 26ರಂದು ಪಾಕಿಸ್ತಾನದ 10 ಮಂದಿ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 166 ಮಂದಿ ಜೀವ ಕಳೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.