ತಹವ್ವುರ್ ರಾಣಾ
ಪಿಟಿಐ
ನ್ಯೂಯಾರ್ಕ್: ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾ ಅವರನ್ನು ಅಮೆರಿಕದಿಂದ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ಸರ್ಕಾರಿ ಮೂಲಗಳ ಪ್ರಕಾರ, ಭಾರತದ ಬಹು ಏಜೆನ್ಸಿ ತಂಡವು ಅಮೆರಿಕಕ್ಕೆ ತೆರಳಿದ್ದು, ಎಲ್ಲ ದಾಖಲೆಗಳು ಮತ್ತು ಕಾನೂನುಬದ್ಧತೆಗಳನ್ನು ಅಮೆರಿಕದ ಅಧಿಕಾರಿಗಳೊಂದಿಗೆ ಪೂರ್ಣಗೊಳಿಸಲಾಗುತ್ತಿದೆ.
ರಾಣಾ ಅವರನ್ನು ಶೀಘ್ರದಲ್ಲೇ ಹಸ್ತಾಂತರಿಸುವ ಸಾಧ್ಯತೆ ತುಂಬಾ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಣಾ ಅವರನ್ನು ಬುಧವಾರ ಭಾರತಕ್ಕೆ ಕರೆತರುತ್ತಿಲ್ಲ. ಆದರೆ, ಹಸ್ತಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.
ಅಮೆರಿಕದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ, ರಾಣಾ ಅರ್ಜಿಯನ್ನು ತಿರಸ್ಕರಿಸಿದ ನಂತರ ಭಾರತಕ್ಕೆ ಹಸ್ತಾಂತರದಿಂದ ತಪ್ಪಿಸಿಕೊಳ್ಳುವ ಉಗ್ರನ ಕೊನೆಯ ಪ್ರಯತ್ನ ವಿಫಲವಾಗಿದ್ದು, ಅದಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಆಗುತ್ತಿದೆ.
ಪ್ರಸ್ತುತ ರಾಣಾ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಡಿಟೆನ್ಷನ್ ಸೆಂಟರ್‌ನಲ್ಲಿದ್ದಾನೆ.
ರಾಣಾ ತನ್ನ ಹಸ್ತಾಂತರ ತಡೆಯಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು. ಆದರೆ, ನ್ಯಾಯಮೂರ್ತಿ ಕಗನ್ ಮಾರ್ಚ್ 6ರಂದು ಅದನ್ನು ನಿರಾಕರಿಸಿದರು ಎಂದು ನ್ಯೂಯಾರ್ಕ್ ಮೂಲದ ಭಾರತೀಯ-ಅಮೆರಿಕನ್ ವಕೀಲ ರವಿ ಬಾತ್ರಾ ಪಿಟಿಐಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.