ADVERTISEMENT

ಕೋವಿಡ್‌-19: ಭಾರತಕ್ಕೆ ವೈದ್ಯಕೀಯ ಪರಿಕರಗಳನ್ನು ರವಾನಿಸಿದ ತೈವಾನ್

ರಾಯಿಟರ್ಸ್
Published 2 ಮೇ 2021, 11:15 IST
Last Updated 2 ಮೇ 2021, 11:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತೈಪೆ (ತೈವಾನ್‌): ಕೋವಿಡ್‌ ‌ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವಾಗುವ ಸಂಬಂಧ ತೈವಾನ್‌ ರಾಷ್ಟ್ರ, ಆಮ್ಲಜನಕದ 150 ಕಾನ್ಸನ್‌ಟ್ರೇಟರ್‌ ಮತ್ತು 500 ಸಿಲಿಂಡರ್‌ಗಳನ್ನು ಕಳುಹಿಸಿಕೊಟ್ಟಿದೆ ಎಂದು ತೈವಾನ್‌ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ನಿತ್ಯ 4 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೋವಿಡ್‌ ವಿರುದ್ಧದ ಹೋರಾಟಕ್ಕಾಗಿ ಹಲವು ರಾಷ್ಟ್ರಗಳು ನೆರವಿಗೆ ಧಾವಿಸುತ್ತಿವೆ.

ಭಾನುವಾರ ಬೆಳಿಗ್ಗೆ ಚೀನಾ ಏರ್‌ಲೈನ್ಸ್ ಕಾರ್ಗೊ ವಿಮಾನದ ಮೂಲಕ ಈ ಎಲ್ಲ ವೈದ್ಯಕೀಯ ಪರಿಕರಗಳು ರವಾನೆಯಾಗಿದೆ. ಈ ಪರಿಕರಗಳನ್ನು ಭಾರತದ ರೆಡ್‌ಕ್ರಾಸ್ ಸಂಸ್ಥೆ ಸ್ವೀಕರಿಸಲಿದೆ ಎಂದು ತೈವಾನ್‌ನ ವಿದೇಶಾಂಗ ಸಚಿವಾಲಯ ತಿಳಿಸಿದೆ. ಭಾರತಕ್ಕೆ ಅಗತ್ಯವಿರುವ ನೆರವು ನೀಡುವುದಾಗಿ ತೈವಾನ್ ತಿಳಿಸಿದೆ.

ADVERTISEMENT

‘ತೈವಾನ್‌, ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗಳು ಮತ್ತು ಸಿಲಿಂಡರ್‌ಗಳು ತೈವಾನ್‌ ಪ್ರೀತಿಯಿಂದ ಕಳುಹಿಸಿಕೊಡುತ್ತಿದೆ. ಇನ್ನಷ್ಟು ನೆರವು ಶೀಘ್ರದಲ್ಲೇ ಭಾರತದಲ್ಲಿರುವ ನಮ್ಮ ಸ್ನೇಹಿತರಿಗಾಗಿ ತಲುಪಲಿದೆ. #ಇಂಡಿಯಾ ಸ್ಟೇಸ್ಟ್ರಾಂಗ್!" ಎಂಬ ಹ್ಯಾಷ್‌ಟ್ಯಾಗ್‌ ಸೇರಿಸಿ ವಿದೇಶಾಂಗ ಸಚಿವ ಜೋಸೆಫ್ ವು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.