ADVERTISEMENT

‘ತಲ್ಲಿಕಿ ವಂದನಂ’ ಅಡಿ ₹ 10,091 ಕೋಟಿ ವೆಚ್ಚ: ನಾಯ್ಡು

ಪಿಟಿಐ
Published 12 ಜೂನ್ 2025, 15:26 IST
Last Updated 12 ಜೂನ್ 2025, 15:26 IST
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು   

ಅಮರಾವತಿ: ಆಂಧ್ರಪ್ರದೇಶ ಸರ್ಕಾರದ ಆರು ಪ್ರಮುಖ ಕಲ್ಯಾಣ ಕಾರ್ಯಕ್ರಮಗಳಲ್ಲಿ ‌‘ತಲ್ಲಿಕಿ ವಂದನಂ’ (ತಾಯಿಗೆ ವಂದನೆ) ಅತ್ಯಂತ ಮಹತ್ವದ್ದು, ಶಾಲೆಗೆ ಹೋಗುವ ಪ್ರತಿ ಮನೆಯ ಹೆಣ್ಣು ಮಕ್ಕಳಿಗೆ ಈ ಯೋಜನೆ ವಾರ್ಷಿಕ ₹15,000 ಒದಗಿಸಲಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗುರುವಾರ ಹೇಳಿದ್ದಾರೆ.

ಉಂಡವಲ್ಲಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಚಂದ್ರಬಾಬು ನಾಯ್ಡು ಅವರು, ‘ಟಿಡಿಪಿ ನೇತೃತ್ವದ ಸರ್ಕಾರ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ  ‘ತಲ್ಲಿಕಿ ವಂದನಂ’ ಯೋಜನೆಯ ಅಡಿ ₹10,091 ಕೋಟಿ ವೆಚ್ಚ ಮಾಡಲಿದೆ’ ಎಂದು ತಿಳಿಸಿದರು.

2024ರ ಚುನಾವಣೆ ವೇಳೆ ನಾಯ್ಡು ಅವರು ‘ಸೂಪರ್ ಸಿಕ್ಸ್‌’ ಶೀರ್ಷಿಕೆ ಅಡಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಿದ್ದರು. 19–59 ವರ್ಷದ ಮಹಿಳೆಯರಿಗೆ ಮಾಸಿಕ ₹1,500, ಯುವಕರಿಗೆ 20 ಲಕ್ಷ ಉದ್ಯೋಗ ಅಥವಾ ಮಾಸಿಕ ₹3,000 ನಿರುದ್ಯೋಗ ಭತ್ಯೆ ಮತ್ತು ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಯೋಜನೆಗಳನ್ನು ಪ್ರಕಟಿಸಿದ್ದರು.

ADVERTISEMENT

‘ಒಂದು ಮನೆಯಲ್ಲಿ ಎರಡು ಅಥವಾ ಅದಕ್ಕೂ ಹೆಚ್ಚು ಮಕ್ಕಳಿದ್ದರೆ ಒಂದೇ ಮಗುವಿಗೆ ಸೌಲಭ್ಯ ನೀಡುವುದು ಸರಿಯಲ್ಲ. ಹೀಗಾಗಿ ಕುಟುಂಬದ ಎಲ್ಲ ಮಕ್ಕಳಿಗೂ ಯೋಜನೆಯ ಸೌಲಭ್ಯ ಸಿಗಲಿದ್ದು, 67 ಲಕ್ಷಕ್ಕೂ ಹೆಚ್ಚು ಜನರು ಇದರ ಲಾಭ ಪಡೆಯಲಿದ್ದಾರೆ. ₹1,346 ಕೋಟಿ ವೆಚ್ಚದಲ್ಲಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.