ADVERTISEMENT

ತಮಿಳುನಾಡು ವಿದ್ಯಾರ್ಥಿನಿಗೆ ₹ 3 ಕೋಟಿ ವಿದ್ಯಾರ್ಥಿ ವೇತನ

ಪಿಟಿಐ
Published 20 ಡಿಸೆಂಬರ್ 2021, 11:23 IST
Last Updated 20 ಡಿಸೆಂಬರ್ 2021, 11:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ತಮಿಳುನಾಡು ಈರೋಡ್‌ ಜಿಲ್ಲೆಯ 17 ವರ್ಷದ ವಿದ್ಯಾರ್ಥಿನಿಗೆ ಅಮೆರಿಕದ ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣಕ್ಕಾಗಿ ₹ 3 ಕೋಟಿ ವಿದ್ಯಾರ್ಥಿ ವೇತನ ದೊರೆತಿದೆ.

ಕಾಸಿಪಾಳಯಂ ಗ್ರಾಮದ ನಿವಾಸಿ ಸ್ವೆಗಾ ಸಾಮಿನಾಥನ್ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿನಿ. ಇವರ ತಂದೆ ಕೃಷಿಕರು ಎಂದು ವಿದ್ಯಾರ್ಥಿನಿಗೆ ನಾಯಕತ್ವ ಅಭಿವೃದ್ಧಿಯ ಕುರಿತಂತೆ ತರಬೇತಿ ನೀಡಿರುವ ಡೆಕ್ಸ್‌ಟೆರಿಟಿ ಗ್ಲೋಬಲ್‌ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿ ವೇತನ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸ್ವೆಗಾ, ಇದರ ಹಿರಿಮೆಯುಡೆಕ್ಸ್‌ಟೆರಿಟಿ ಗ್ಲೋಬಲ್‌ ಸಂಸ್ಥೆ ಮತ್ತು ಅದರ ಸ್ಥಾಪಕ ಶರದ್‌ ಸಾಗರ್ ಅವರಿಗೆ ಸಲ್ಲಬೇಕು ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.