ADVERTISEMENT

ತಮಿಳುನಾಡು: ಸ್ಥಳೀಯ ಸಂಸ್ಥೆ ಚುನಾವಣೆ- ಡಿಎಂಕೆ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 16:35 IST
Last Updated 13 ಅಕ್ಟೋಬರ್ 2021, 16:35 IST
ಎಂ.ಕೆ.ಸ್ಟಾಲಿನ್‌
ಎಂ.ಕೆ.ಸ್ಟಾಲಿನ್‌   

ಚೆನ್ನೈ: ತಮಿಳುನಾಡಿನಲ್ಲಿ ಒಂಬತ್ತು ಜಿಲ್ಲೆಗಳ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಮತ್ತು ಅದರ ಮೈತ್ರಿ ಪಕ್ಷಗಳು, ಎಐಎಡಿಎಂಕೆ- ಬಿಜೆಪಿ ಮೈತ್ರಿ ವಿರುದ್ಧಭರ್ಜರಿ ಗೆಲುವು ಸಾಧಿಸಿವೆ.

ಅ.6 ಮತ್ತು 9 ರಂದು ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷವು ಎಲ್ಲ ಒಂಬತ್ತು ಜಿಲ್ಲಾ ಪಂಚಾಯಿತಿಗಳನ್ನು ಮತ್ತು ಶೇ 90 ಕ್ಕಿಂತ ಹೆಚ್ಚಿನ ಯೂನಿಯನ್ ಪಂಚಾಯಿತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ADVERTISEMENT

140 ಜಿಲ್ಲಾ ವಾರ್ಡ್‌ಗಳಲ್ಲಿ ಡಿಎಂಕೆ ಮೈತ್ರಿಕೂಟವು 138ರಲ್ಲಿ ಜಯ ಗಳಿಸಿದೆ. ಮುಖ್ಯ ವಿರೋಧ ಪಕ್ಷ ಎಐಎಡಿಎಂಕೆಗೆ ಕೇವಲ ಎರಡು ಸ್ಥಾನಗಳನ್ನು ಗಳಿಸಿದೆ. ಎಪ್ರಿಲ್ 6ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 10 ವರ್ಷಗಳ ಆಡಳಿತ ವಿರೋಧಿ ಅಲೆಯ ನಡುವೆಯೂ 66 ಸ್ಥಾನಗಳನ್ನುಎಐಎಡಿಎಂಕೆ ಗೆದ್ದುಕೊಂಡಿತ್ತು. ಚೆಂಗಲ್ಪಟ್ಟು ಮತ್ತು ವಿಲ್ಲುಪುರಂನಲ್ಲಿ ಒಂದೊಂದು ಜಿಲ್ಲಾ ವಾರ್ಡ್ ಅನ್ನು ಗೆದ್ದರೆ, ಕಾಂಚೀಪುರಂ, ರಾಣಿಪೇಟೆ, ತಿರುಪ್ಪತ್ತೂರು, ತಿರುನೆಲ್ವೇಲಿ, ಕಲ್ಲಕುರಿಚಿ, ವೆಲ್ಲೂರು ಮತ್ತು ತೆಂಕಾಸಿಯಲ್ಲಿ ಎಐಎಡಿಎಂಕೆ ಶೂನ್ಯ ಸಂಪಾದಿಸಿದೆ.

ಯೂನಿಯನ್ ಪಂಚಾಯತ್ ಚುನಾವಣೆಗಳಲ್ಲಿ ಎಐಎಡಿಎಂಕೆ ಪಕ್ಷವು ಒಟ್ಟು 1,381 ಸ್ಥಾನಗಳ ಪೈಕಿ ಕೇವಲ 218ರಲ್ಲಿ ಮುನ್ನಡೆಯಲ್ಲಿದೆ. ಡಿಎಂಕೆ ಮೈತ್ರಿಕೂಟವು 1,000ಕ್ಕಿಂತಲೂ ಹೆಚ್ಚು ವಾರ್ಡ್‌ಗಳಲ್ಲಿ ಗೆದ್ದಿದೆ. ಎಐಎಡಿಎಂಕೆ ಮೈತ್ರಿಕೂಟದಿಂದ ಹೊರಬಂದ ಪಿಎಂಕೆ 44 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿಗೆ 8 ಯೂನಿಯನ್ ವಾರ್ಡ್‌ಗಳಲ್ಲಿ ಮಾತ್ರ ಗೆಲುವು ದಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.