ಮಣಿಪುರ ಹೈಕೋರ್ಟ್
– ವೆಬ್‌ಸೈಟ್ ಚಿತ್ರ
ಇಂಫಾಲ್: ಖುರುಲ್ ಜಿಲ್ಲೆಗೆ ತೆರಳುತ್ತಿದ್ದ ವಾಹನವೊಂದನ್ನು ಅಡ್ಡಗಟ್ಟಿ ಅದರ ಚಾಲಕ ಹಾಗೂ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ದೌರ್ಜನ್ಯ ಎಸಗಿದವರನ್ನು 24 ಗಂಟೆಗಳ ಒಳಗೆ ತಮಗೆ ಒಪ್ಪಿಸುವಂತೆ ಟ್ಯಾಂಗ್‌ಕುಲ್ ನಾಗಾ ಸಮುದಾಯದ ಸಂಘಟನೆಗಳು ಕುಕಿ ಬುಡಕಟ್ಟು ಸಮುದಾಯದಕ್ಕೆ ಶುಕ್ರವಾರ ಗಡುವು ನೀಡಿವೆ.
ಮಣಿಪುರದ ಈ ಜಿಲ್ಲೆಯಲ್ಲಿ ನಾಗಾ ಬುಡಕಟ್ಟು ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಜಿಲ್ಲೆಗೆ ಅಂಟಿಕೊಂಡಿರುವ ಪ್ರದೇಶಗಳಲ್ಲಿ ಕುಕಿ ಬುಡಕಟ್ಟು ಸಮುದಾಯದವರು ವಾಸಿಸುತ್ತಾರೆ. ‘ಕುಕಿ ಬುಡಕಟ್ಟು ಸಮುದಾಯವರು ಇದೇ ಮೊದಲ ಬಾರಿಗೆ ಇಂಥ ಕೃತ್ಯ ಎಸಗಿದ್ದಾರೆ’ ಎಂದು ಸಂಘಟನೆಗಳು ಹೇಳಿವೆ.
‘ಕಿಡಿಗೇಡಿಗಳನ್ನು ನಮ್ಮ ವಶಕ್ಕೆ ನೀಡದೇ ಇದ್ದರೆ, ಕುಕಿಗಳು ಗಂಭೀರ ಪರಿಣಾಮ ಎದುರಿಸಬೇಕಾಗಬಹುದು. ನಮ್ಮ ಜಿಲ್ಲೆಗೆ ಅವರಿಗೆ ಪ್ರವೇಶವನ್ನೇ ನಿರಾಕರಿಸಲಾಗುವುದು. ಸಂಘರ್ಷ ಆರಂಭವಾದಾಗಿನಿಂದಲೂ ನಾವು ಶಾಂತಿ ಬಯಸಿದ್ದೇವೆ. ಇದನ್ನು ನಮ್ಮ ದೌರ್ಬಲ್ಯ ಅಥವಾ ಹೇಡಿತನ ಎಂದು ಭಾವಿಸಬಾರದು’ ಎಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.