ADVERTISEMENT

ಸುಹೇಲ್ ಸೇಥ್ ಕೈಬಿಟ್ಟ ಟಾಟಾ ಸನ್ಸ್

ಪಿಟಿಐ
Published 29 ಅಕ್ಟೋಬರ್ 2018, 18:09 IST
Last Updated 29 ಅಕ್ಟೋಬರ್ 2018, 18:09 IST
ಸುಹೇಲ್ ಸೇಥ್
ಸುಹೇಲ್ ಸೇಥ್   

ನವದೆಹಲಿ: ಮೀ–ಟೂ ಆರೋಪ ಕೇಳಿಬಂದ ಕಾರಣ ಪ್ರಸಿದ್ಧ ಸಲಹೆಗಾರ ಸುಹೇಲ್ ಸೇಥ್ ಅವರ ಜೊತೆಗಿನ ಒಡನಾಟವನ್ನು ಟಾಟಾ ಸನ್ಸ್ ಕೊನೆಗೊಳಿಸಿದೆ.

ರೂಪದರ್ಶಿ ಡಯಾಂಡ್ರ ಸರೌಸ್, ಚಿತ್ರನಿರ್ಮಾಪಕಿ ನತಾಶಾ ರಾಥೋರ್ ಮತ್ತು ಬರಹಗಾರ್ತಿ ಇರಾ ತ್ರಿವೇದಿ ಮೊದಲಾದವರು ಸೇಥ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು.

ಆರೋಪ ಕೇಳಿಬಂದ ತಕ್ಷಣದಿಂದಲೇ ಸೇಥ್ ಅವರ ಜೊತೆಗಿನ ಸಂಬಂಧ ಕಡಿತಗೊಳಿಸಿಕೊಂಡಿರುವುದಾಗಿ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಗೆ ಸೇಥ್ ಲಭ್ಯರಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.