ADVERTISEMENT

ಚೀನಾ ದಾರದಿಂದ ಹದಿಹರೆಯದ ಬಾಲಕರ ಮುಖ, ಕುತ್ತಿಗೆ ಗಾಯ

ಪಿಟಿಐ
Published 27 ಜನವರಿ 2023, 9:35 IST
Last Updated 27 ಜನವರಿ 2023, 9:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಫಾಗ್ವಾರ(ಪಂಜಾಬ್‌): ಚೀನಾ ಉತ್ಪಾದಿತ ಗಾಳಿಪಟ ಹಾರಿಸುವ ದಾರದಿಂದಾಗಿ(ಚೈನೀಸ್ ಮಾಂಝಾ) ಪಂಜಾಬ್‌ನ ಅನೇಕ ಪ್ರದೇಶಗಳಲ್ಲಿ ಹದಿಹೆರಯಾದವರ ಮುಖ ಮತ್ತು ಕತ್ತಿನ ಮೇಲೆ ಗಾಯಗಳಾಗಿವೆ.

17 ವರ್ಷದ ಸಾಹಿಲ್ ಬೈಕ್‌ನಲ್ಲಿ ಚಲಿಸುವಾಗ ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿಕೊಂಡಿದ್ದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಹಲವು ಪ್ರದೇಶಗಳಲ್ಲಿ ಕಳೆದ ಕೆಲವು ದಿನದಿಂದ ಚೀನಾದ ದಾರದಿಂದಾಗಿ ಜನರಿಗೆ ಗಾಯಗಳಾಗಿರುವ ಹಲವಾರು ಘಟನೆಗಳು ವರದಿಯಾಗಿವೆ.

ADVERTISEMENT

ಇಲ್ಲಿನ ಇಂದರ್ ನಗರ ಪ್ರದೇಶದ ಅಂಗಡಿಯವರೊಬ್ಬರು ಮಾಂಝಾ ದಾರವನ್ನು ಮಾರಾಟ ಮಾಡಿದ್ದಕ್ಕಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.