ADVERTISEMENT

Bihar Election 2025 | ಡ್ರೋನ್‌ ಡಿಕ್ಕಿಯಿಂದ ತಪ್ಪಿಸಿಕೊಂಡ ತೇಜಸ್ವಿ ಯಾದವ್‌

ಪಿಟಿಐ
Published 29 ಜೂನ್ 2025, 14:29 IST
Last Updated 29 ಜೂನ್ 2025, 14:29 IST
<div class="paragraphs"><p>ತೇಜಸ್ವಿ ಯಾದವ್‌</p></div>

ತೇಜಸ್ವಿ ಯಾದವ್‌

   

ಪಾಟ್ನಾ: ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಭಾನುವಾರ ಇಲ್ಲಿ ನಡೆದ ‘ವಕ್ಫ್‌ ಉಳಿಸಿ; ಸಂವಿಧಾನ ರಕ್ಷಿಸಿ’ ರ್‍ಯಾಲಿಯಲ್ಲಿ ಮಾತನಾಡುತ್ತಿರುವಾಗ ಡ್ರೋನ್‌ ಕ್ಯಾಮೆರಾ ಡಿಕ್ಕಿಯಾಗುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ.

ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ರ್‍ಯಾಲಿಯಲ್ಲಿ ತೇಜಸ್ವಿ ಯಾದವ್‌ ಮಾತನಾಡುತ್ತಿದ್ದಾಗ ಅವರಿದ್ದ ವೇದಿಕೆ ಸಮೀಪಕ್ಕೆ ಡ್ರೋನ್‌ ಬಂತು. ತಕ್ಷಣವೇ ಅವರು ಬದಿಗೆ ಸರಿದಿದ್ದರಿದ ಡ್ರೋನ್‌ ಅವರಿಗೆ ಡಿಕ್ಕಿಯಾಗುವುದು ತಪ್ಪಿ, ವೇದಿಕೆಗೆ ಬಡಿದು ಕೆಳಗೆ ಬಿತ್ತು. 

ADVERTISEMENT

‘ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ’ ಎಂದು ಪಾಟ್ನಾ ಎಸ್‌ಪಿ ದೀಕ್ಷಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.