ಪಟ್ನಾ: ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ 35 ಲಕ್ಷ ಮತದಾರರು ನೋಂದಾಯಿತ ವಿಳಾಸದಲ್ಲಿ ಕಂಡುಬಂದಿಲ್ಲ ಎಂಬ ಚುನಾವಣಾ ಆಯೋಗದ ವಾದವನ್ನು ಆರ್‌ಜೆಡಿ ಪಕ್ಷದ ಮುಖಂಡ ತೇಜಸ್ವಿ ಯಾದವ್ ತಳ್ಳಿ ಹಾಕಿದ್ದಾರೆ.
‘ಆಯೋಗವು ಆಡಳಿತರೂಢ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ (ಪ್ರಕೋಷ್ಠ) ಅಂಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ದೇಶನದಂತೆ ಮೇಲೆ ಇಂತಹ ಪ್ರಚಾರಗಳನ್ನು ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.
‘ಆಯೋಗವು ನಡೆಸುತ್ತಿರುವ ಇಂತಹ ಪ‍್ರಚಾರವು ಅತ್ಯಂತ ಅಪಾಯಕಾರಿಯಾಗಿದೆ. ಅತ್ಯಂತ ಉಪಾಯದಿಂದ ಮತದಾರರ ಪಟ್ಟಿಯನ್ನು ಎನ್‌ಡಿಎ ಒಕ್ಕೂಟವು ಬದಲಾಯಿಸಲಿದೆ. ಇದು ಮುಂದಿನ ಪಂಚಾಯತ್ ಚುನಾವಣೆಯ ಮೇಲೂ ತೀವ್ರವಾದ ಪರಿಣಾಮ ಬೀರಲಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.