ADVERTISEMENT

ತೆಲಂಗಾಣ: ದುಬ್ಬಕ್‌ ಕ್ಷೇತ್ರದಲ್ಲಿ 7ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ

ಪಿಟಿಐ
Published 10 ನವೆಂಬರ್ 2020, 8:02 IST
Last Updated 10 ನವೆಂಬರ್ 2020, 8:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್‌: ತೆಲಂಗಾಣದ ದುಬ್ಬಕ್‌ ವಿಧಾನಸಭಾ ಕ್ಷೇತ್ರದಲ್ಲಿ ಏಳು ಸುತ್ತಿನ ಮತ ಎಣಿಕೆ ‍ಪೂರ್ಣಗೊಂಡಿದ್ದು, ಆಡಳಿತರೂಢ ಪಕ್ಷ ಟಿಆರ್‌ಎಸ್‌ವನ್ನು ಹಿಂದಿಕ್ಕಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಬಿಜೆಪಿ ಅಭ್ಯರ್ಥಿ ಎಂ.ರಘುನಂದನ್‌ ರಾವ್‌ ಅವರು ಟಿಆರ್‌ಎಸ್‌ ಪ್ರತಿಸ್ಪರ್ಧಿ ಸೊಲಿಪೇಟ ಸುಜಾತ್‌ ಅವರಿಗಿಂತ 2,485 ಮತಗಳಿಂದ ಮುಂದಿದ್ದಾರೆ.

ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು,ಈಗಾಗಲೇ ಏಳು ಸುತ್ತುಗಳು ಪೂರ್ಣಗೊಂಡಿದೆ. 23 ಸುತ್ತಿನ ಮತ ಎಣಿಕೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.