ADVERTISEMENT

ಹುತಾತ್ಮ ಮೂವರು ಕಮಾಂಡೊಗಳ ಕುಟುಂಬಕ್ಕೆ ತಲಾ ₹1 ಕೋಟಿ ಪರಿಹಾರ: ತೆಲಂಗಾಣ ಸರ್ಕಾರ

ಪಿಟಿಐ
Published 10 ಮೇ 2025, 14:21 IST
Last Updated 10 ಮೇ 2025, 14:21 IST
ಎ.ರೇವಂತ ರೆಡ್ಡಿ
ಎ.ರೇವಂತ ರೆಡ್ಡಿ   

ಹೈದರಾಬಾದ್‌: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಇತ್ತೀಚೆಗೆ ನೆಲಬಾಂಬ್ ಸ್ಫೋಟಿಸಿ ಮೃತಪಟ್ಟಿದ್ದ ನಕ್ಸಲ್ ವಿರೋಧಿ ಪಡೆಯ ಮೂವರು ಕಮಾಂಡೊಗಳ ಕುಟುಂಬಗಳಿಗೆ ತೆಲಂಗಾಣ ರಾಜ್ಯ ಸರ್ಕಾರವು ತಲಾ ಒಂದು ಕೋಟಿ ವಿಶೇಷ ಪರಿಹಾರವನ್ನು ಪ್ರಕಟಿಸಿದೆ.

ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಈ ಪರಿಹಾರ ಘೋಷಿಸಿದ್ದಾರೆ. ಈ ಕುರಿತ ಹೇಳಿಕೆಯಲ್ಲಿ ಮುಖ್ಯಮಂತ್ರಿ ಅವರ ಕಚೇರಿಯು, ‘ಭದ್ರತೆ ಯೋಜನೆಯಡಿ ₹80 ಲಕ್ಷ ನೆರವು, ನಿವೇಶನ ಹಂಚಿಕೆ ಮಾಡಲಾಗುವುದು. ಅಲ್ಲದೆ, ಕುಟುಂಬದ ಅರ್ಹ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

ಮುಲುಗು ಜಿಲ್ಲೆಯಲ್ಲಿ ಪೊಲೀಸರ ತಂಡ ತಪಾಸಣಾ ಕಾರ್ಯದಲ್ಲಿ ಇದ್ದಾಗ ಮೇ 8ರಂದು ನೆಲಬಾಂಬ್‌ ಸ್ಫೋಟಿಸಿ ಅವಘಡ ಸಂಭವಿಸಿತ್ತು. ಮೂವರು ಕಮಾಂಡೊಗಳು ಮೃತಪಟ್ಟಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.