ADVERTISEMENT

ಕೋವಿಡ್‌ 19 ಜಾಗೃತಿಗಾಗಿ ಟೆಲಿಕಾಂ ಕಂಪೆನಿಗಳಿಂದ ಕಾಲರ್‌ ಟ್ಯೂನ್‌

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 8:16 IST
Last Updated 9 ಮಾರ್ಚ್ 2020, 8:16 IST
   

ಬೆಂಗಳೂರು: ಕೋವಿಡ್‌ 19 ಕುರಿತು ಜಾಗೃತಿ ಮೂಡಿಸುವ ಸಂದೇಶವುಳ್ಳ ಕಾಲರ್‌ ಟ್ಯೂನ್‌ಗಳನ್ನು ಅಳವಡಿಸಿಕೊಳ್ಳುವಂತೆ ಭಾರತೀಯ ದೂರ ಸಂಪರ್ಕ ಇಲಾಖೆಯು ಟೆಲಿಕಾಂ ಕಂಪನಿಗಳಿಗೆ ತಿಳಿಸಿದೆ.

ಸರ್ಕಾರದ ಸೂಚನೆ ಪಾಲಿಸಿರುವ ಬಿಎಸ್‌ಎನ್‌ಎಲ್‌, ಏರ್‌ಟೆಲ್‌ ಮತ್ತು ಜಿಯೋ ಕಂಪನಿಗಳು ಫೋನ್‌ ರಿಂಗಣಿಸುವ ಸದ್ದಿಗೆ ಬದಲಾಗಿ ಸಂದೇಶವುಳ್ಳ ಕಾಲರ್‌ ಟ್ಯೂನ್‌ ಬರುವಂತೆ ವ್ಯವಸ್ಥೆ ಮಾಡಿವೆ.

ಅದರಂತೆ ಬಿಎಸ್‌ಎನ್‌ಎಲ್‌, ಏರ್‌ಟೆಲ್‌ ಮತ್ತು ಜಿಯೋ ಗ್ರಾಹಕರಿಗೆ ಕರೆ ಮಾಡಿದರೆ, ಕೋವಿಡ್‌ 19 ಕುರಿತ ಜಾಗೃತಿ ಮೂಡಿಸುವ ಸಂದೇಶ ಕೇಳಿ ಬರುತ್ತದೆ. ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಈ ಸಂದೇಶ ಕೇಳಿಸುತ್ತದೆ.

ADVERTISEMENT

‘ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಮುಖವನ್ನು ಕರವಸ್ತ್ರಗಳಿಂದ ಅಥವಾ ಟಿಶ್ಯೂ ಪೇಪರ್‌ನಿಂದ ಮುಚ್ಚಿಕೊಳ್ಳಿ. ಕೈಗಳನ್ನು ನಿಯಮಿತವಾಗಿ ತೊಳೆದುಕೊಳ್ಳಿ. ಮುಖ, ಕಣ್ಣು, ಮೂಗನ್ನು ಹೆಚ್ಚಾಗಿ ಮುಟ್ಟದಿರಿ. ಯಾರಿಗಾದರೂ ಕೆಮ್ಮು, ನೆಗಡಿ, ಜ್ವರ ಅಥವಾ ಉಸಿರಾಟದ ತೊಂದರೆ ಇದ್ದರೆ ಅವರಿಂದ ಒಂದು ಮೀಟರ್‌ ಅಂತರ ಕಾಯ್ದುಕೊಳ್ಳಿ. ಅಗತ್ಯವಿದ್ದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ,’ ಎಂದು ಸಂದೇಶದಲ್ಲಿ ವಿವರಿಸಲಾಗುತ್ತದೆ. ಕೊನೆಯಲ್ಲಿ +91-11-23797-8046 ಸಹಾಯವಾಣಿಗೆ ಕರೆ ಮಾಡುವಂತೆ ಕೋರಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.