ನವದೆಹಲಿ: ಸಿಂಘು ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯರು ಎಂದು ಹೇಳಿಕೊಳ್ಳುವ ಜನರು ಹಾಗೂ ಪ್ರತಿಭಟನಾ ನಿರತ ರೈತರ ಮಧ್ಯೆ ಗಲಾಟೆ ನಡೆದಿದೆ.
ಈ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿರುವ ಘಟನೆಗಳು ವರದಿಯಾಗಿದೆ. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರಲ್ಲದೆಅಶ್ರುವಾಯು ಪ್ರಯೋಗಿಸಿದರು.
ಪೊಲೀಸ್ ಬ್ಯಾರಿಕೇಡ್‌ಗಳನ್ನು ಧ್ವಂಸಗೊಳಿಸಲಾಗಿದೆ. ಸ್ಥಳೀಯರೆಂದು ಹೇಳಿಕೊಳ್ಳುತ್ತಿರುವ ಜನರು ರೈತರ ವಿರುದ್ಧ ಘೋಷಣೆಗಳನ್ನು ಕೂಗಿ, ಸ್ಥಳ ಖಾಲಿ ಮಾಡುವಂತೆ ಪ್ರತಿಭಟಿಸಿದರು.
ಖಾಲಿಸ್ತಾನ್ ವಿರೋಧಿ ಘೋಷಣೆ, ಭಾರತದ ತ್ರಿವರ್ಣ ಪತಾಕೆಗೆ ಆದ ಅವಮಾನವನ್ನು ದೇಶ ಎಂದಿಗೂ ಸಹಿಸುವುದಿಲ್ಲಮುಂತಾದಘೋಷಣೆಗಳನ್ನು ಸ್ಥಳೀಯರುಕೂಗಿದರು.
ಕಳೆದ ದಿನವಷ್ಟೇಪ್ರತಿಭಟನಾ ನಿರತ ರೈತರು ಸ್ಥಳ ಬಿಟ್ಟು ತೆರಳುವಂತೆ ಸ್ಥಳೀಯರುಪ್ರತಿಭಟನೆ ನಡೆಸಿದ್ದರು.
ಗಣರಾಜ್ಯೋತ್ಸವ ದಿನದಂದು ನಡೆಸಲಾದ ಟ್ರ್ಯಾಕ್ಟರ್ ಜಾಥಾದಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ದೆಹಲಿ ಹರಿಯಾಣದ ಸಿಂಘು ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಕೇಂದ್ರ ಸರ್ಕಾರದ ನೂತನ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ನವೆಂಬರ್ 26ರಿಂದಲೇ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.