ನವದೆಹಲಿ: ‘ಪಾಕಿಸ್ತಾನದಲ್ಲಿ ಭಯೋತ್ಪಾದನೆಯು ಮುಕ್ತ ವ್ಯಾಪಾರವಾಗಿದೆ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
‘ಅಲ್ಲಿನ ಮಿಲಿಟರಿ ಮತ್ತು ಆಡಳಿತವು ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುವ ಜೊತೆಗೆ ಸಂಘಟನೆಗೂ ಬಲ ತುಂಬುತ್ತಿವೆ’ ಎಂದು ಆರೋಪಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಈಚೆಗೆ ನಡೆದ ಸಂಘರ್ಷದ ಸಮಯದಲ್ಲಿ, ಎರಡೂ ರಾಷ್ಟ್ರಗಳು ಅಣ್ವಸ್ತ್ರ ಬಳಸುವಿಕೆಯಿಂದ ಬಹಳ ದೂರದಲ್ಲಿದ್ದವು ಎಂದು ಸ್ಪಷ್ಟಪಡಿಸಿದ್ದಾರೆ.
‘ನಮ್ಮ ಭಾಗದ ಸಕಲ ವಿದ್ಯಮಾನಕ್ಕೂ ಅಣ್ವಸ್ತ್ರದ ನಂಟು ಬೆಸೆಯುವ ಪ್ರವೃತ್ತಿ ಪಶ್ಚಿಮದ್ದಾಗಿದೆ’ ಎಂದು ಜರ್ಮನ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ನಿಮ್ಮ ಪ್ರಶ್ನೆಯಿಂದ ಆಶ್ಚರ್ಯವಾಗಿದೆ. ಅಣ್ವಸ್ತ್ರದಿಂದ ನಾವು ತುಂಬಾ ದೂರವಿದ್ದೇವೆ. ಆದರೆ ಪಶ್ಚಿಮವು ಇಂತಹ ಹೇಳಿಕೆ ನೀಡುವುದಲ್ಲದೆ, ಭಯೋತ್ಪಾದನೆಯಂತಹ ಭಯಾನಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ’ ಎಂದಿದ್ದಾರೆ.
‘ಪಾಕಿಸ್ತಾನದ ನಗರಗಳು ಹಾಗೂ ಪಟ್ಟಣಗಳಲ್ಲಿ ಭಯೋತ್ಪಾದಕ ಸಂಘಟನೆಗಳು ಬಹಿರಂಗವಾಗಿ ಕಾರ್ಯಾಚರಿಸುತ್ತಿವೆ’ ಎಂದೂ ಹೇಳಿದ್ದಾರೆ.
ಹತ್ತಿರ ಹತ್ತಿರ...:
ಪಾಕಿಸ್ತಾನದೊಂದಿಗಿನ ಭಾರತದ ಸಂಘರ್ಷದಲ್ಲಿ ಚೀನಾದ ಪಾತ್ರ ಕುರಿತಂತೆ ಪ್ರಶ್ನಿಸಿದ್ದಕ್ಕೆ, ‘ಪಾಕಿಸ್ತಾನದ ಬಳಿಯಿರುವ ಅನೇಕ ಶಸ್ತ್ರಾಸ್ತ್ರಗಳಲ್ಲಿ ಬಹಳಷ್ಟು ಚೀನಾದವು. ಉಭಯ ದೇಶಗಳು ಪರಸ್ಪರ ಹತ್ತಿರದಲ್ಲಿವೆ. ಆದ್ದರಿಂದ ನಿಮ್ಮ ಸ್ವಂತ ತೀರ್ಮಾನಗಳನ್ನು ನೀವು ತೆಗೆದುಕೊಳ್ಳಬಹುದು’ ಎಂದು ಜೈಶಂಕರ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.