ADVERTISEMENT

ಶ್ರೀನಗರ: ಗುಂಡಿನ ದಾಳಿ, ಮೂವರು ಉಗ್ರರ ಹತ್ಯೆ

ಪಿಟಿಐ
Published 12 ನವೆಂಬರ್ 2021, 8:57 IST
Last Updated 12 ನವೆಂಬರ್ 2021, 8:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ನಿಷೇಧಿತ ಮುಜಾಹಿದ್ದೀನ್‌ ಗಜ್‌ವಾಟುಲ್‌ ಹಿಂದ್‌ (ಎಂಜಿಎಚ್‌) ಸಂಘಟನೆಯ ಸದಸ್ಯ, ಶಂಕಿತ ಉಗ್ರನನ್ನು ನಗರದಲ್ಲಿ ಹತ್ಯೆ ಮಾಡಲಾಗಿದೆ. ಈತಶ್ರೀನಗರದಲ್ಲಿ ಆತ್ಮಹತ್ಯಾ ದಾಳಿ ನಡೆಸಲು ನಿಯೋಜಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದೆಡೆ ದಕ್ಷಿಣ ಕಾಶ್ಮೀರದ ಕುಲ್‌ಗಮ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ (ಎಚ್‌ಎಂ) ಸಂಘಟನೆಯ ಜಿಲ್ಲಾ ಕಮಾಂಡರ್‌ ಸೇರಿ ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ ಎಂದೂ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಶ್ರೀನಗರದಲ್ಲಿ ಹತ್ಯೆಗೀಡಾದ ಉಗ್ರನು, ಈ ಹಿಂದೆ ಪುಲ್ವಾಮಾದ ಲೆತ್‌ಪೊರಾದಲ್ಲಿ ಫೆಬ್ರುವರಿ 2019ರಲ್ಲಿ ನಡೆದಿದ್ದ ಆತ್ಮಹತ್ಯಾ ದಾಳಿಯ ಪ್ರಕರಣದ ಆರೋಪಿಯೊಬ್ಬನ ಸಂಬಂಧಿಕನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯಾ ದಾಳಿ ಕೃತ್ಯದಲ್ಲಿ 40 ಮಂದಿ ಸಿಆರ್‌ಪಿಎಫ್‌ ಪೊಲೀಸರು ಮೃತಪಟ್ಟಿದ್ದರು.

ADVERTISEMENT

‘ಶ್ರೀನಗರದಲ್ಲಿ ಹತ್ಯೆಗೀಡಾದ ಉಗ್ರನನ್ನು ಎಂಜಿಎಚ್‌ ಸಂಘಟನೆ ಸದಸ್ಯ ಆಮಿರ್‌ ರಿಯಾಜ್‌ ಎಂದು ಗುರುತಿಸಲಾಗಿದೆ’ ಎಂದು ಕಾಶ್ಮೀರದ ಐಜಿಪಿ ವಿಜಯ್‌ ಕುಮಾರ್‌ ಅವರು ಟ್ವೀಟ್‌ ಮಾಡಿದ್ದಾರೆ.

ಗುರುವಾರ ಸಂಜೆ ಬೆಮಿನಾದ ಹಮ್‌ದನಿಯಾ ಕಾಲೊನಿಯಲ್ಲಿ ಎನ್‌ಕೌಂಟರ್‌ ನಡೆದಿತ್ತು. ಉಗ್ರನ ಶವ ಪತ್ತೆಯಾಗಿದ್ದ ಈ ಸ್ಥಳದಲ್ಲಿ ಎಕೆ ರೈಫಲ್‌, ಕೆಲವುಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಇನ್ನೊಂದೆಡೆ, ದಕ್ಷಿಣ ಕಾಶ್ಮೀರದ ಕುಲ್‌ಗಮ್‌ ಜಿಲ್ಲೆಯಲ್ಲಿ ಚಕಮಕಿ ನಡೆಸಿದ ಘಟನೆಯ ಹೊಣೆಯನ್ನು ಮುಜಾಹಿದ್ದೀನ್‌ ಗಟ್‌ವಾಟುಲ್‌ ಹಿಂದ್ಸಂಘಟನೆ ಹೊತ್ತುಕೊಂಡಿದೆ. ತನ್ನ ಮೂವರು ಕಾರ್ಯಕರ್ತರು ಸಿಆರ್‌ಪಿಎಫ್‌ ಶಿಬಿರದ ಮೇಲೆ ದಾಳಿ ನಡೆಸಿದರು ಎಂದು ಸಂಘಟನೆ ಹೇಳಿಕೊಂಡಿದೆ.

‘ಎನ್‌ಕೌಂಟರ್‌ನಲ್ಲಿ ಹತರಾದ ಉಗ್ರರನ್ನು ಎಚ್‌ಎಂ ಸಂಘಟನೆಯ ಜಿಲ್ಲಾ ಕಮಾಂಡರ್‌ ಶಿರಾಜ್‌ ಮೊಲ್ವಿ ಮತ್ತು ಯವರ್‌ ಭಟ್‌ ಎಂದು ಗುರುತಿಸಲಾಗಿದೆ. ಪೊಲೀಸರ ದೃಷ್ಟಿಯಿಂದ ಇದು ದೊಡ್ಡ ಯಶಸ್ಸು’ ಐಜಿಪಿ ವಿಜಯ್‌ ಕುಮಾರ್ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.