ADVERTISEMENT

ಟಿಇಟಿ ಅಕ್ರಮ:ಐಎಎಸ್‌ ಅಧಿಕಾರಿ ಬಂಧನ

ಪಿಟಿಐ
Published 29 ಜನವರಿ 2022, 11:38 IST
Last Updated 29 ಜನವರಿ 2022, 11:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಣೆ: ಮಹಾರಾಷ್ಟ್ರದಲ್ಲಿ 2020ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿನ (ಟಿಇಟಿ) ಅಕ್ರಮಕ್ಕೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿ ಸುಶೀಲ್‌ ಖೋಡ್‌ವೆಕರ್‌ ಅವರನ್ನು ಠಾಣೆ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 13ಕ್ಕೆ ಏರಿದೆ.

ಪೊಲೀಸರ ಪ್ರಕಾರ, ಟಿಟಿಟಿ–2020 ಪರೀಕ್ಷೆಯಲ್ಲಿ ಹಣಕ್ಕಾಗಿ ಸುಮಾರು 7,800 ಅಭ್ಯರ್ಥಿಗಳ ಅಂಕಗಳನ್ನು ತಿರುಚಲಾಗಿತ್ತು.ಬಂಧಿತ ಐಎಎಸ್‌ ಅಧಿಕಾರಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು ಎಂದು ಪುಣೆಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಇದಕ್ಕೂ ಮೊದಲು ಮಹಾರಾಷ್ಟ್ರ ಪರೀಕ್ಷಾ ಮಂಡಳಿಯ ಆಯುಕ್ತ ತುಕಾರಾಂ ಸುಪೆ, ಜಿಎ ಸಾಫ್ಟ್‌ವೇರ್ ಸಂಸ್ಥೆಯ ಪ್ರಿತೀಶ್‌ ದೇಶ್‌ಮುಖ್, ಶಿಕ್ಷಣ ಇಲಾಖೆಯ ಕನ್ಸಲ್ಟಂಟ್‌ ಅಭಿಷೇಕ್‌ ದೇಶ್‌ಮುಖ್‌ ಸೇರಿ 12 ಜನರನ್ನು ಬಂಧಿಸಲಾಗಿತ್ತು. ಅಲ್ಲದೆ, ₹ 4 ಕೋಟಿಗೂ ಅಧಿಕ ನಗದು, ಚಿನ್ನಾಭರಣ ಜಪ್ತಿ ಮಾಡಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.