ಬಂಧನ
(ಸಾಂದರ್ಭಿಕ ಚಿತ್ರ)
ಠಾಣೆ: ನಿಷೇಧಿತ ಕೊಡೇನ್‌ಯುಕ್ತ (ಸಣ್ಣ ನೋವು ನಿವಾರಕ) ₹53,550 ಮೌಲ್ಯದ ಕೆಮ್ಮಿನ ಔಷಧವನ್ನು ಬೈಕ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಓರ್ವನನ್ನು ಮಹಾರಾಷ್ಟ್ರದ ಠಾಣೆಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶಿಲ್ ದೈಗರ್ ಪ್ರದೇಶದ ಸಿಬ್ಲಿನಗರದಲ್ಲಿ ಬೈಕ್‌ನಲ್ಲಿ ಔಷಧ ಸಾಗಣೆ ಮಾಡುತ್ತಿದ್ದ 22 ವರ್ಷದ ವ್ಯಕ್ತಿಯನ್ನು ಪೊಲೀಸ್ ತಂಡ ಶುಕ್ರವಾರ ಮಧ್ಯಾಹ್ನ ಬಂಧಿಸಿದೆ.
ತಪಾಸಣೆ ವೇಳೆ ಎರಡು ಬಾಕ್ಸ್‌ಗಳಲ್ಲಿ ತುಂಬಿದ್ದ 238 ನಿಷೇಧಿತ ಕೊಡೇನ್‌ಯಕ್ತ ಕೆಮ್ಮಿನ ಔಷಧ ಇರುವುದು ಪತ್ತೆಯಾಗಿದೆ ಎಂದು ಶಿಲ್ ದೈಗರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಆತನಿಂದ ₹ 1,800 ನಗದು ಹಾಗೂ ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಆತನ ವಿರುದ್ಧ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.