ADVERTISEMENT

ಮಹಾರಾಷ್ಟ್ರ: ಸೂಟ್‌ಕೇಸ್‌ನಲ್ಲಿ ಮಹಿಳೆ ಶವ ಪತ್ತೆ: ಸಹ ಜೀವನ ಸಂಗಾತಿಯಿಂದಲೇ ಕೃತ್ಯ

ಪಿಟಿಐ
Published 26 ನವೆಂಬರ್ 2025, 7:02 IST
Last Updated 26 ನವೆಂಬರ್ 2025, 7:02 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಠಾಣೆ(ಮಹಾರಾಷ್ಟ್ರ): ಇಲ್ಲಿನ ದೇಸಾಯಿ ಗ್ರಾಮದ ಬಳಿ ಸೇತುವೆ ಕೆಳಗೆ ಸಿಕ್ಕ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಆಕೆಯ ಸಹ ಜೀವನ(ಲಿವ್‌–ಇನ್‌ ರಿಲೇಷನ್‌ಶಿಪ್) ಸಂಗಾತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಿಯಾಂಕಾ ವಿಶ್ವಕರ್ಮ(22) ಕೊಲೆಯಾದ ಮಹಿಳೆ. ಆಕೆಯ ಶವ ಸೋಮವಾರ ಸೇತುವೆ ಕೆಳಗೆ ಪತ್ತೆಯಾಗಿತ್ತು. ಮೃತಳ ಮಣಿಕಟ್ಟಿನ ಮೇಲೆ ‘ಪಿ. ವಿ. ಎಸ್’ ಎಂದು ಹೆಚ್ಚೆ ಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸ್ಥಳೀಯ ಸಿಸಿಟಿವಿ ಸಹಾಯದಿಂದ ಆರೋಪಿ ವಿನೋದ್ ಶ್ರೀನಿವಾಸ್ ವಿಶ್ವಕರ್ಮನನ್ನು ಬಂಧಿಸಿರುವ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಪ್ರಿಯಾಂಕಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಕಳೆದ ಐದು ವರ್ಷಗಳಿಂದ ವಿನೋದ್ ಶ್ರೀನಿವಾಸ್‌ ಜೊತೆ ಪ್ರಿಯಾಂಕಾ ಸಹ ಜೀವನ ನಡೆಸುತ್ತಿದ್ದರು. ನವೆಂಬರ್ 21ರ ನಡುವೆ ಇಬ್ಬರ ನಡುವೆ ಜಗಳವಾಗಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ.

ಕೊಲೆಯಾದ ದಿನ ಶವವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪಿ, ಅದು ಕೊಳೆಯಲು ಪ್ರಾರಂಭಿಸಿ ದುರ್ವಾಸನೆ ಹರಡುತ್ತಿದ್ದಂತೆ, ಶವವನ್ನು ಸೂಟ್‌ಕೇಸ್‌ಗೆ ತುಂಬಿ ಸೇತುವೆಯ ಕೆಳಗೆ ಎಸೆದಿದ್ದಾನೆ.

ಆರೋಪಿ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.