ADVERTISEMENT

ಅಲ್ಲಿ ಇಬ್ಬರು ಮಲಯಾಳಿ ತಾಲಿಬಾನಿಗಳು ಇರಬಹುದು: ವಿಡಿಯೊ ಹಂಚಿಕೊಂಡ ಶಶಿ ತರೂರ್‌

ಪಿಟಿಐ
Published 17 ಆಗಸ್ಟ್ 2021, 7:48 IST
Last Updated 17 ಆಗಸ್ಟ್ 2021, 7:48 IST
ಶಶಿ ತರೂರ್‌ ಹಂಚಿಕೊಂಡ ವಿಡಿಯೊದ ಚಿತ್ರ
ಶಶಿ ತರೂರ್‌ ಹಂಚಿಕೊಂಡ ವಿಡಿಯೊದ ಚಿತ್ರ    

ಕೊಚ್ಚಿ: ಅಫ್ಗಾನಿಸ್ತಾನದಲ್ಲಿ ವಿಜಯೋತ್ಸವ ಆಚರಿಸುತ್ತಿರುವ ತಾಲಿಬಾನ್ ಗುಂಪಿನ ವಿಡಿಯೊವೊಂದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಮಂಗಳವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಇಬ್ಬರು ವ್ಯಕ್ತಿಗಳು ಮಲಯಾಳಂನಲ್ಲಿ ಮಾತನಾಡುತ್ತಿರುವುದು ಕೇಳಿಬರುತ್ತದೆ.

ವಿಡಿಯೊ ಹಂಚಿಕೊಂಡಿರುವ ಶಶಿ ತರೂರ್‌ ಟ್ವೀಟರ್‌ನಲ್ಲಿ ಹೀಗೆ ಬರೆದಿದ್ದಾರೆ...‘ಇಲ್ಲಿ ಕನಿಷ್ಠ ಇಬ್ಬರು ಮಲಯಾಳಿ ತಾಲಿಬಾನ್‌ಗಳಿರುವಂತೆ ತೋರುತ್ತಿದೆ. ವಿಡಿಯೊನ 8 ಸಕೆಂಡ್‌ನಲ್ಲಿ ವ್ಯಕ್ತಿಯೊಬ್ಬರು ‘ಸಂಸಾರಿಕಟ್ಟೆ’ (ಮಾತಾಡಲಿ)’ ಎಂದು ಹೇಳುತ್ತಾರೆ. ಇನ್ನೊಬ್ಬರು ಅದನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ,’ ಎಂದಿದ್ದಾರೆ.

ADVERTISEMENT

ಪತ್ರಕರ್ತ ರಮೀಜ್‌ ಎಂಬುವವರು ಆಗಸ್ಟ್ 15 ರಂದು ಪೋಸ್ಟ್ ಮಾಡಿದ ವೀಡಿಯೊವನ್ನು ರೀಟ್ವೀಟ್‌ ಮಾಡಿಕೊಂಡಿರುವ ತರೂರ್‌ ಅದರಲ್ಲಿ ತಮ್ಮ ಅಭಿಪ್ರಾಯವನ್ನೂ ಸೇರಿಸಿದ್ದಾರೆ.

ತಾಲಿಬಾನಿಗಳು ಕಾಬೂಲ್‌ ತಲುಪಿದಾಗ ಸಂತೋಷದಿಂದ ಅಳುತ್ತಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ,

ಶಶಿ ತರೂರ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪತ್ರಕರ್ತ ಕೋರಾ ಅಬ್ರಹಾಂ ಎಂಬುವವರು, ‘ಕೇರಳದ ಕೆಲ ಮಂದಿ ಜಿಹಾದಿ ಗುಂಪುಗಳನ್ನು ಸೇರುತ್ತಿರುವುದರಿಂದ ಬಲಪಂಥೀಯ ಗುಂಪುಗಳು ಕೇರಳ ವಿರುದ್ಧ ದ್ವೇಷಪೂರಿತ ಅಪಪ್ರಚಾರ ನಡೆಸುತ್ತಿವೆ. ಇಂಥ ಹೊತ್ತಿನಲ್ಲಿ ಹೀಗೆ ಟ್ವೀಟ್‌ ಮಾಡುವುದು ಅತ್ಯಂತ ಸಮಸ್ಯಾತ್ಮಕ. ನೀವು ಕೇರಳ ರಾಜಧಾನಿಯ ಸಂಸದರು ಎಂಬುದರ ಅರಿವು ಇದ್ದರೆ ಒಳಿತು,‘ ಎಂದು ಮನದಟ್ಟು ಮಾಡಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.